Select Your Language

Notifications

webdunia
webdunia
webdunia
webdunia

ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸುತ್ತಾ ಬೆಳಗಾವಿ ರಾಜಕಾರಣ..?

ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸುತ್ತಾ ಬೆಳಗಾವಿ ರಾಜಕಾರಣ..?
bangalore , ಮಂಗಳವಾರ, 24 ಅಕ್ಟೋಬರ್ 2023 (14:06 IST)
ಬಿಜೆಪಿ ಮತ್ತು ಜೆಡಿಎಸ್‌ನ ರಾಜಕೀಯ ಕೋಟೆಯನ್ನು ಕೆಡವಿ, ಕರ್ನಾಟಕದಲ್ಲಿ ದೊಡ್ಡ ಅಂತರದ ಗೆಲುವನ್ನು ಪಡೆದ ಕಾಂಗ್ರೆಸ್‌ನ ಸಾಮರ್ಥ್ಯವನ್ನು ಮೆಚ್ಚಲೇಬೇಕು. ಅಷ್ಟು ಸುಲಭವಾಗಿ ಕಾಂಗ್ರೆಸ್ ಬರೋಬ್ಬರಿ ೧೩೫ ಸ್ಥಾನಗಳನ್ನು ಗೆದ್ದು ಹೊಸ ಚರಿತ್ರೆಯನ್ನು ಬರೆಯುತ್ತೆ ಅಂತ ಯಾರೂ ಕೂಡ ಗೇಸ್ ಮಾಡಿರಲಿಕ್ಕಿಲ್ಲ ಅನ್ನಿಸುತ್ತೆ... ಯಾರೋ ಯಾಕೆ ಸ್ವತಃ ಕಾಂಗ್ರೆಸ್ಸಿನ ನಾಯಕರಿಗೇ ಅಂತಹದೊAದು ನಂಬಿಕೆ ಇರಲಿಲ್ಲ. ಅದರಲ್ಲೂ ಕನಕಪುರದ ಬಂಡೆ, ಮತ್ತು ಮಾಸ್ ಲೀಡರ್ ಸಿದ್ದರಾಮಯ್ಯನವರಿಗೂ, ನಾವೂ ೧೨೦ + ಗೆಲ್ಲೀವಿ ಅನ್ನೋದು ಗೊತ್ತಿರಲಿಲ್ಲ ಅನ್ನಿಸುತ್ತೆ.. ಸುಮ್ಮನೇ ಬಾಯಿ ಮಾತಿಗೆ ೧೨೦ ಸೀಟ್ ಕಾಂಗ್ರೆಸ್ ಪಕ್ಷ ಗೆಲುತ್ತೆ ಅಂತಾ ಹೇಳೋದು ಬೇರೆ, ಆದರೆ ಡಿಕೆಶಿ, ಮತ್ತು ಸಿದ್ದರಾಮಯ್ಯ ಪದೇ ಪದೇ ಇದೇ ಮಾತನ್ನು ಹೇಳುತ್ತಾ ಬಂದಿದ್ದರು..? ಆದರೆ ಫೈನಲೀ ಅದೇ ಮಾತು ಸತ್ಯವಾಗಿತ್ತು..
 
ಹೀಗೆ ಬರೋಬ್ಬರಿ ೧೩೫ ಸೀಟ್ ಗೆದ್ದ ಕೈ ಪಾಳಯಕ್ಕೆ ಸರ್ಕಾರ ಮೂರು ತಿಂಗಳು ಕಳೆದು ಹೋದ ನಂತರ ಒಂಥರ ಹಳೇಯ ಸಂಕಷ್ಟಕ್ಕೆ ಸಿಕ್ಕಿ ಒದ್ದಾಡುವ ಪರಿಸ್ಥಿತಿ ಎದುರಾದಂತಿದೆ.. ಹಾಗೇ ನೋಡಿದರೆ ಈಗ ಉದ್ಬವವಾಗ್ತಾ ಇರುವ ಸಮಸ್ಯೆ, ಈ ಹಿಂದೆ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರವನ್ನು ಕೆಡವಿ, ಕೊನೆಗೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದಕ್ಕೆ ಮೂಲ ಕಾರಣ ಕೂಡ ಆಗಿತ್ತು..
 
ಅರೇ ಹಾಗಾದರೇ ಅದ್ಯಾವಾ ಸಮಸ್ಯೆ ಅನ್ನುವ ಹಿಂಟ್ ನಿಮ್ಗೆ ಈಗಾಗಲೆ ಸಿಕ್ಕಿ ಬಿಟ್ಟಿರುತ್ತೆ. ಕಣ್ಣ ಮುಂದೇ, ಬೆಳಗಾವಿ ರಾಜಕಾರಣ ರಪ್ ಅಂತಾ ಹಾಗೇ ಒಂದು ಕ್ಷಣ ಬಂದು ಹೋಗಿರುತ್ತೆ...
 
ಯೆಸ್... ರಾಜ್ಯ ರಾಜಕಾರಣದಲ್ಲಿ ಪ್ರಮುಖವಾಗಿ ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದು ಇದೇ ಬೆಳಗಾವಿ ರಾಜಕಾರಣ, ಯಾಕಂದರೆ ಇದ್ದಕ್ಕಿಂದ್ದAತೆ ಸರ್ಕಾರವೊಂದು ಅನಾಯಾಸವಾಗಿ ಬಿದ್ದು ಹೋಗುತ್ತೆ ಅಂದರೆ, ಇಲ್ಲಿನ ರಾಜಕಾರಣದ ತಾಕತ್ತು ಇನ್ಯಾಗೀರ ಬೇಡ ಹೇಳಿ. ಬಹುಶಃ ಬರೀ ವೈಯಕ್ತಿಕ ಪ್ರತಿಷ್ಠೆಗಳಿಂದಲೇ, ಸರ್ಕಾರ, ಮತ್ತು ಆಡಳಿತವನ್ನು ಅಲುಗಾಡಿಸುವ ಇಂತಹ ಪಾಲಿಟಿಕ್ಸ್ ಶೋಭೆ ತರುವಂತದ್ದು ಅಲ್ಲ. ಬಟ್ ಏನು ಮಾಡೋದು, ರಾಜಕೀಯ ಅನ್ನುವ ಆ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಾಗ, ಇಂತಹ ಹಲವು ರಾಜಕೀಯ ಪ್ರಹಸನಗಳು ನಡೆದು ಹೋಗಿ ಬಿಡುತ್ತವೆ.
 
ಆದರೆ ಇವಾಗ ಬೆಳಗಾವಿ ರಾಜಕಾರಣ ಮತ್ತು ಗ್ಯಾರಂಟಿ ಸರ್ಕಾರದ ಮಧ್ಯೆ ಹೊಸ ರಾದ್ದಾಂತ ಸೃಷ್ಟಿ ಆಗುವ ಆತಂಕ ಎದ್ದಿದೆ. ಹಾಗಾದರೆ ಇದರ ವ್ಯಾಪಕತೆಗೆ ಇನ್ನಷ್ಟು ಹೆಚ್ಚಾದರೆ, ಸಿದ್ದರಾಮಯ್ಯ ಸರ್ಕಾರಕ್ಕೂ ದೊಡ್ಡ ಗಂಡಾAತರ ಎದುರಾಗಿ ಬಿಡಬಹುದಾ..? ಅಥವಾ ಸರ್ಕಾರವೇ, ಮುಂದಾಗುವ ಸಮಸ್ಯೆಯನ್ನು ಮೊದಲೇ ಅರಿತು, ಆಗಬಹುದಾದ ಕಂಟಕವನ್ನೂ ದೂರ ಮಾಡುತ್ತಾ..? ಬಟ್ ನಾಟ್‌ಶ್ಯೂರ್...
 
ಬರೀ ವೈಯಕ್ತಿಕ ಜಿದ್ದು, ಪ್ರತಿಷ್ಠೆ, ವೈಮನಸ್ಸು ಕೆಲವೊಮ್ಮೆ ಜನಪ್ರತಿನಿಧಿಗಳನ್ನು ಅತ್ಯಂತ ಹೀನಾಯ ಸ್ಥಿತಿಗೆ ತಂದು ನಿಲ್ಲಿಸುತ್ತೆ.. ಹಾಗೇ ನೋಡಿದರೆ, ಈ ಹಿಂದಿನಿAದಲೂ ಈ ಬೆಳಗಾವಿಯಲ್ಲಿ ನಡೆಯುತ್ತಾ ಬಂದಿರೋದು ಇದೇ ಅಲ್ಲವೇ..? ಮೊದಲಿಗೆ ಸಾಹುಕಾರನ ಆಟ ಶುರುವಾಗಿ, ಕೊನೆಗೆ ಅದು ಬಿಜೆಪಿಯ ಅಧಿಕಾರದ ಆಸೆಗೆ ವೇದಿಕೆಯನ್ನು ಒದಗಿಸಿಕೊಟ್ಟಿತ್ತು... ಬಟ್ ಆ ನಂತರ ಬೆಳಗಾವಿ ರಾಜಕಾರಣ ಎಲ್ಲಿಂದ, ಎಲ್ಲಿಗೆ ಹೋಗಿ ಮುಟ್ಟಿದೆ ಅನ್ನೋದು ಕಣ್ಣ ಮುಂದಿದೆ..?
 
ಮತ್ತೇ ರಾಜ್ಯ ರಾಜ್ಯಕೀಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುವ ಪ್ರಮೇಯ, ಸಂದರ್ಭ ಬೆಳಗಾವಿಯಿಂದಲೇ ಆರಂಭವಾಗಬಹುದಾ..? ಸರ್ಕಾರದಲ್ಲಿ ಮಂತ್ರಿ ಸ್ಥಾನಮಾನಗಳನ್ನು ಪಡೆದುಕೊಂಡರೂ, ತಮ್ಮ ವೈಯಕ್ತಿಕ ಪ್ರತಿಷ್ಠೆ, ಹಠ, ಹೀಗೆ ಎಕ್ಸೆಟ್ರಾ ಹಾಗೇ ಹೀಗೆ ಅಂತ ಅಧಿಕಾರದಲ್ಲಿರುವ ಸರ್ಕಾರಕ್ಕೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಾ ಇರೋದು ಅದೆಷ್ಟು ಸರೀ..!??
 
ಸದ್ಯ ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಬೆಳಗಾವಿ ರಾಜಕೀಯಕ್ಕೆ ಹೆಚ್ಚಿನ ಒತ್ತು, ಮತ್ತು ಪ್ರಾಶಸ್ತö್ಯವನ್ನು ನೀಡಿದರೂ, ಅದ್ಯಾಕೋ ಹಳೇಯ ಜಿದ್ದು, ಮತ್ತೆ ಹುಟ್ಟಿಕೊಂಡಿತಾ, ಅನ್ನುವ ಅನುಮಾನ ಶುರುವಾಗಿದೆ.. ಆದರೂ, ತಮ್ಮ ಸ್ವಪ್ರತಿಷ್ಠೆಗಾಗಿ, ಅಭಿವೃದ್ದೀ, ಗ್ಯಾರಂಟಿ ಯೋಜನೆಗಳಿಗಾಗಿ, ಹಣ ಒದಗಿಸುವ ಸವಾಲನ್ನು ಎದುರಿಸುತ್ತಿರುವ ಸರ್ಕಾರಕ್ಕೆ ಇವರಿವರ ಒಳ ಶೀತಲಸಮರ ಸರ್ಕಾರಕ್ಕೆ ಇನ್ನಷ್ಟು ಕಗ್ಗಂಟಾಗಿ ಬಿಟ್ಟರೇ, ಇವರನ್ನು ಆರಿಸಿ ಕಳಿಸಿದ ಆ ಜನರು ಮೂರ್ಖರಾದಂತೆ ಅಲ್ಲವೇ..?

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಮೋಸ್ಟ್ ವಾಂಟೆಡ್ ಉಗ್ರ ಫಿನಿಶ್ ಆದ್ನಾ..?