ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಇಂದು ನ್ಯಾಯಾಧೀಶರ ಮುಂದೆ ಜೈಲಿನ ಜೀವನ ನರಕವಾಗಿದ್ದು, ಇರಲಾಗದೆ ವಿಷ ಕೊಟ್ಟುಬಿಡಿ ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ಅವರ ಪರಿಸ್ಥಿತಿ ತಿಳಿದು ಅವರ ಆಪ್ತ ರಾಜವರ್ಧನ್ ಅವರು ಬೇಸರ ಹೊರಹಾಕಿದ್ದಾರೆ.
ದರ್ಶನ್ ಅವರು ಇಂತಹ ಕೆಟ್ಟ ನಿರ್ಧಾರ ಕೈಗೊಳ್ಳಬಾರದು. ಅವರು ಅಲ್ಲಿ ಹೀಗೆಲ್ಲ ಮಾತನಾಡೋದ್ರಿಂದ ಇಲ್ಲಿ ನಾವು ಡಿಸ್ಟರ್ಬ್ ಆಗ್ತೀವಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದರ್ಶನ್ ಈ ಥರದ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಅವರಿಗಾಗಿ ಇಲ್ಲಿ ಎಷ್ಟೋ ಜನ್ರು ಪ್ರಾರ್ಥನೆ ಮಾಡ್ತಿದ್ದಾರೆ. ಈಗಿರುವ ಕೆಟ್ಟ ಪರಿಸ್ಥಿತಿ ಮುಂದೆ ಸರಿ ಹೋಗುತ್ತೆ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.
ಜೈಲಿನ ಪರಿಸ್ಥಿತಿ ನೋಡಿ, ಯಾರಿಗೋಸ್ಕರ ಇಷ್ಟೆಲ್ಲ ಮಾಡಬೇಕು ಅಂತ ದರ್ಶನ್‌ಗೆ ಅನಿಸುತ್ತದೆ. ಆದರೆ ಅವರ ಈ ಮಾತು ಅವರಿಗಾಗಿ ಹೊರಗಡೆ ಪ್ರಾರ್ಥನೆ ಮಾಡುತ್ತಿರುವವರಿಗೆ ತುಂಬಾನೆ ನೋವಾಗುತ್ತದೆ.
ದರ್ಶನ್ ಅವರು ತುಂಬಾ ಚೆನ್ನಾಗಿ ಬಾಳಿದ ವ್ಯಕ್ತಿ. ಅವರು ಮೂರನೇ ಬಾರಿ ಅಲ್ಲಿಗೆ ಹೋಗಿ ಹೀಗೆ ಕಷ್ಟ ಪಡ್ತಿರೋದು. ಕಷ್ಟ ಸಹಿಸಲಾಗದೆ ಹಾಗೆಲ್ಲ ಮಾತನಾಡಿರ್ತಾರೆ ಎಂದು ಹೇಳಿದ್ದಾರೆ.