Select Your Language

Notifications

webdunia
webdunia
webdunia
webdunia

ಪ್ರಧಾನಿ ಕೆಪಿ ಶರ್ಮಾ ಸಲ್ಲಿಸಿದ ರಾಜೀನಾಮೆಯನ್ನು ಅಂಗೀರಿಸಿದ ನೇಪಾಳ ರಾಷ್ಟ್ರಪತಿ

ನೇಪಾಳ ರಾಷ್ಟ್ರಪತಿ ರಾಮಚಂದ್ರ ಪೌಡೆಲ್

Sampriya

ಕಠ್ಮಂಡು , ಮಂಗಳವಾರ, 9 ಸೆಪ್ಟಂಬರ್ 2025 (17:58 IST)
Photo Credit X
ಕಠ್ಮಂಡು: ನೇಪಾಳದಲ್ಲಿ ನಡೆಯುತ್ತಿರುವ ಭಾರೀ ಹಿಂಸಚಾರದ ನಡುವೆ ಪ್ರಧಾನಿ ಕೆಪಿ ಶರ್ಮಾ ಓಲಿ ಅವರು ರಾಜೀನಾಮೆಯನ್ನು ನೇಪಾಳ ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಅವರುಅಧಿಕೃತವಾಗಿ ಅಂಗೀಕರಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಓಲಿ ಅವರ ಘೋಷಣೆಯ ನಂತರ,ಜನರಲ್ ಝಡ್ ಯುವಕರ ನೇತೃತ್ವದಲ್ಲಿ ಅಭೂತಪೂರ್ವ ಪ್ರತಿಭಟನೆಗಳ ನಡುವೆ ರಾಜೀನಾಮೆ ನೀಡಲಾಗಿದೆ. 

ಕಳೆದ ಎರಡು ದಿನಗಳಲ್ಲಿ, ಈ ಪ್ರದರ್ಶನಗಳು ತೀವ್ರವಾಗಿ ಉಲ್ಬಣಗೊಂಡಿವೆ, ಫೆಡರಲ್ ಸಂಸತ್ತು ಮತ್ತು ಕಠ್ಮಂಡುವಿನ ಇತರ ಭಾಗಗಳ ಸುತ್ತ ನಡೆದ ಘರ್ಷಣೆಗಳಲ್ಲಿ ಕನಿಷ್ಠ 19 ಸಾವುಗಳು ಮತ್ತು 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ಪ್ರತಿಭಟನಾಕಾರರು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪೃಥ್ವಿ ಸುಬ್ಬ ಗುರುಂಗ್ ಅವರ ಮನೆಗೆ ಬೆಂಕಿ ಹಚ್ಚಿದರು, ಉಪ ಪ್ರಧಾನಿ ಮತ್ತು ಹಣಕಾಸು ಸಚಿವ ಬಿಷ್ಣು ಪೌಡೆಲ್, ನೇಪಾಳ ರಾಷ್ಟ್ರ ಬ್ಯಾಂಕ್ ಗವರ್ನರ್ ಬಿಸ್ವೊ ಪೌಡೆಲ್ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದರು ಮತ್ತು ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ. ಸನೆಪಾದಲ್ಲಿರುವ ನೇಪಾಳಿ ಕಾಂಗ್ರೆಸ್‌ನ ಕೇಂದ್ರ ಕಚೇರಿಯನ್ನು ಮಂಗಳವಾರ ಮಧ್ಯಾಹ್ನ ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ.

ಪ್ರತಿಭಟನಾಕಾರರು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರ ಮನೆಗಳನ್ನು ಬುಧನೀಲಕಂಠದಲ್ಲಿ ಧ್ವಂಸಗೊಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವೆ ಎಂದ ಬಿಕೆ ಸಂಗಮೇಶ: ಈ ಜನ್ಮದಲ್ಲೇ ಆಗಿ ಎಂದ ಅಶೋಕ್