ಬೆಂಗಳೂರು: ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವೆ ಎಂದು ಶಿವಮೊಗ್ಗದ ಭದ್ರವತಿ ಶಾಸಕ ಬಿಕೆ ಸಂಗಮೇಶ ಹೇಳಿದ್ದು ಇದಕ್ಕೆ ಬಿಜೆಪಿ ನಾಯಕರಾದ ಆರ್ ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು ಮುಂದಿನ ಜನ್ಮ ಯಾಕೆ ಈ ಜನ್ಮದಲ್ಲೇ ಆಗಿ ಬಿಡಿ ಎಂದು ಟಾಂಗ್ ಕೊಟ್ಟಿದ್ದಾರೆ.
ಬಿಕೆ ಸಂಗಮೇಶ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್ ಅಶೋಕ್ ಇಸ್ಲಾಂ ಧರ್ಮದಲ್ಲಿ ಪುನರ್ಜನ್ಮದ ಪರಿಕಲ್ಪನೆ ಇಲ್ಲ ಶಾಸಕ ಸಂಗಮೇಶ್ ಅವರೇ. ಇಸ್ಲಾಂ ಧರ್ಮದ ಮೇಲೆ ಅಷ್ಟು ಪ್ರೀತಿಯಿದ್ದರೆ ಈ ಜನ್ಮದಲ್ಲೇ ಮತಾಂತರ ಆಗಿಬಿಡಿ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಇಸ್ಲಾಂ ಧರ್ಮದ ಬಗ್ಗೆ ಬಹಳ ವ್ಯಾಮೋಹವಿದೆ. ಅವರನ್ನೂ ಸೇರಿಸಿಕೊಂಡು ಒಟ್ಟು 135 ಶಾಸಕರೂ ಸಾಮೂಹಿಕವಾಗಿ ಮತಾಂತರ ಆಗಿಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ.
ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಷ್ಟೊಂದು ಪ್ರೀತಿಯಿದ್ದರೆ ಮುಂದಿನ ಜನ್ಮದವರೆಗೆ ಯಾಕೆ ಕಾಯಬೇಕು? ಈಗಲೇ ಮತಾಂತರ ಆಗಿ ಬಿಡಿ ಎಂದು ಸಲಹೆ ನೀಡಿದ್ದಾರೆ.