ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಕೈ ಪಡೆ ತಿರುಗೇಟು

ಸೋಮವಾರ, 13 ಮೇ 2019 (11:29 IST)
ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಕೆಪಿಸಿಸಿ ಅಧ್ಯಕ್ಷ ಭರ್ಜರಿಯಾಗಿ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಯಾವುದೇ ಕೆಲಸ ಮಾಡಿಲ್ಲಾ ಎಂಬ ಎಚ್. ವಿಶ್ವನಾಥ ಹೇಳಿಕೆಗೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ಈ ರೀತಿಯಲ್ಲಿ ಹೇಳಿಕೆ ಕೊಡುವ ಮುನ್ನಾ ವಿಚಾರ ಮಾಡಬೇಕು. ಜೆಡಿಎಸ್ ನ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇರುವವರು ಈ ರೀತಿಯಲ್ಲಿ ಹೇಳಿಕೆ ಕೊಡಬಾರದು.

ಅನಗತ್ಯ ಮಾತಾನಾಡಬಾರದು. ಮೊದಲು ಮೈತ್ರಿ ಧರ್ಮ ಪಾಲನೆ ಮಾಡಬೇಕು. ರಾಜ್ಯದ ಬಗ್ಗೆ ಗಮನ ಕೊಡಬೇಕು ಹೊರತು, ಅನಗತ್ಯ ಹೇಳಿಕೆ ಕೊಡಬಾರದು ಎಂದಿದ್ದಾರೆ.

ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದೇವೆ. ಹಿರಿಯರಾಗಿ ಈ ರೀತಿಯಲ್ಲಿ ಹೇಳಿಕೆ ಕೊಡುವುದು ಸರಿಯಲ್ಲ. ನಾವು ಎಷ್ಟು ಸೀಟ್ ಗೆದ್ದಿದ್ದೇವೆ ಎಂಬುದು ಈಗ ಅಪ್ರಸ್ತುತ. ನಾವು ಈಗ ಎಷ್ಟು ಸೀಟ್ ಗೆಲ್ಲುತ್ತೇವೆ ಎನ್ನುವುದು ಮುಖ್ಯ ಅಂತ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿಶ್ವನಾಥ್, ಸಿದ್ದರಾಮಯ್ಯ ಅವರ ಕುರಿತು ಸತ್ಯವಾದ ಮಾತು ಹೇಳಿದ್ದಾರೆ- ಶೋಭಾ ಕರಂದ್ಲಾಜೆ