Publish Date: Mon, 13 May 2019 (07:23 IST)
Updated Date: Mon, 13 May 2019 (07:25 IST)
ನವದೆಹಲಿ: ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್ ವಾದ್ರಾ ಮತದಾನ ಮಾಡಿದ ಬಳಿಕ ಮಾಡಿದ ಸೆಲ್ಫೀಯಿಂದ ವಿವಾದಕ್ಕೊಳಗಾಗಿದ್ದಾರೆ.
ರಾಬರ್ಟ್ ವಾದ್ರಾ ನನ್ನ ದೇಶ ನನ್ನ ಹೆಮ್ಮೆ, ಎಲ್ಲರೂ ವೋಟ್ ಮಾಡಿ ಎಂದೆಲ್ಲಾ ಸಂದೇಶ ಬರೆದು ಕೊನೆಗೆ ಭಾರತದ ಧ್ವಜದ ಚಿತ್ರ ಹಾಕುವ ಬದಲು ಪೆರುಗ್ವೆ ದೇಶದ ರಾಷ್ಟ್ರ ಧ್ವಜದ ಚಿತ್ರ ಹಾಕಿದ್ದಕ್ಕೆ ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.
ಕೊನೆಗೂ ವಾದ್ರಾ ತಾವು ಭಾರತದವರಲ್ಲ, ಪೆರುಗ್ವೆ ತಮ್ಮ ರಾಷ್ಟ್ರೀಯತೆ ಎಂದು ಒಪ್ಪಿಕೊಂಡಂತಾಗಿದೆ ಎಂದು ಹಲವರು ಟ್ರೋಲ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ