ಅನ್ನ ಭಾಗ್ಯ ಸೇರಿ ಹಲವು ಬೇಡಿಕೆಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಸಂಘದ ಅಧ್ಯಕ್ಷ ಕುರುಬೂರುಶಾಂತಕುಮಾರ್ ಒತ್ತಾಯ ಮಾಡಿದ್ದಾರೆ.ಅನ್ನ ಭಾಗ್ಯಕ್ಕೆ ರೈತರಿಂದಲೇ ಅಕ್ಕಿ ಖರೀದಿಸಿ ಅಕ್ಕಿ, ರಾಗಿ ಜೋಳ ,ಸಿರಿಧಾನ್ಯ,ಕಬ್ಬು ಗೆ ಬೆಂಬಲ ಬೆಲರ ಕೊಡಿ,ಎಲ್ಲಾ
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ನಿಗದಿಗೊಳಿಸಿ,ಶಾಸನಾತ್ಮಕ ಖಾತ್ರಿ ನೀಡಲು ಕಾನೂನು ಜಾರಿಗೆ ತರಬೇಕು.ಕೃಷಿ ಉತ್ಪನ್ನಗಳಿಗೆ ವಿಧಿಸಿರುವ ಜಿಎಸ್ ಟಿ ರದ್ದುಪಡಿಸಬೇಕು.ಗೋಹತ್ಯೆ ನಿಷೇಧ ಕಾಯ್ದೆ ರದ್ದು ಪಡಿಸದೇ ಕೆಲ ತಿದ್ದುಪಡಿ ಮಾಡಬೇಕು ಹಾಗೆ ಹಲವು ಬೇಡಿಕೆ ಈಡೇರಿಸಲು ರೈತ ಸಂಘಟನೆಯ ಮುಖಂಡ ಕುರುಬೂರುಶಾಂತಕುಮಾರ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.