Select Your Language

Notifications

webdunia
webdunia
webdunia
webdunia

ಚಿತ್ರವಿಮರ್ಶೆ: ಫಸ್ಟ್ ಹಾಫ್ ಟಿಪಿಕಲ್ ಡೈಲಾಗ್, ಸೆಕೆಂಡ್ ಹಾಫ್ ರೇಸ್ ಶೋ, ಒಟ್ಟಾರೆ ಅದ್ಭುತ ಯೋಗರಾಜ್ ಭಟ್ಟರ ‘ಪಂಚತಂತ್ರ’!

ಚಿತ್ರವಿಮರ್ಶೆ: ಫಸ್ಟ್ ಹಾಫ್ ಟಿಪಿಕಲ್ ಡೈಲಾಗ್, ಸೆಕೆಂಡ್ ಹಾಫ್ ರೇಸ್ ಶೋ, ಒಟ್ಟಾರೆ ಅದ್ಭುತ ಯೋಗರಾಜ್ ಭಟ್ಟರ ‘ಪಂಚತಂತ್ರ’!
ಬೆಂಗಳೂರು , ಶುಕ್ರವಾರ, 29 ಮಾರ್ಚ್ 2019 (09:38 IST)
ಬೆಂಗಳೂರು: ಯೋಗರಾಜ್ ಭಟ್‍ ನಿರ್ದೇಶನದ ‘ಪಂಚತಂತ್ರ’ ಸಿನಿಮಾ ಇಂದು ರಿಲೀಸ್ ಆಗಿದ್ದು, ಫಸ್ಟ್ ಶೋ ನೋಡಿದ ಪ್ರೇಕ್ಷಕ ಸಿನಿಮಾ ಸೂಪರ್ ಎಂದಿದ್ದಾನೆ.


ಚಿತ್ರದ ಮೊದಲಾರ್ಧ ಪಕ್ಕಾ ಯೋಗರಾಜ್ ಭಟ್ ಶೈಲಿ ಡೈಲಾಗ್ ಗಳ ರಸದೌತಣ. ಸೆಕೆಂಡ್ ಹಾಫ್ ನಲ್ಲಿ ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಕಾಣದ ರೇಸಿಂಗ್ ಸೀನ್. ಒಟ್ಟಾರೆ ಅದ್ಭುತ ಸಿನಿಮಾವಿದು ಎಂದು ಟ್ವಿಟರಿಗರು ವಿಮರ್ಶಿಸಿದ್ದಾರೆ.

ಸಾಮಾನ್ಯವಾಗಿ ಭಟ್ ಸಿನಿಮಾಗಳಲ್ಲಿ ನೀರಿನ ಹಿನ್ನಲೆಯ ಕ್ಲೈಮ್ಯಾಕ್ಸ್ ಗಳಿರುತ್ತವೆ. ಫಾರ್ ಎ ಚೇಂಜ್ ಇಲ್ಲಿ ರೇಸಿಂಗ್ ಹಿನ್ನಲೆಯಿದೆ. ಮೈನವಿರೇಳಿಸುವ ನೃತ್ಯ, ರೇಸಿಂಗ್, ಡೈಲಾಗ್ ಗಳು ಈ ಸಿನಿಮಾದ ಜೀವಾಳ. ಕ್ಯಾಮರಾ ವರ್ಕ್ ಮತ್ತು ಹಿನ್ನಲೆ ಸಂಗೀತ ಸಖತ್ತಾಗಿದೆ ಎಂಬುದು ವೀಕ್ಷಕರ ಅಭಿಮತ. ಇನ್ನು, 16 ವರ್ಷದಿಂದ 60 ವರ್ಷದ ಮುದುಕರವರೆಗೂ ನೋಡಬಹುದಾದ ಎಂಟರ್ ಟೈನಿಂಗ್ ಸಿನಿಮಾ ಎಂದು ಈಗಾಗಲೇ ಯೋಗರಾಜ್ ಭಟ್ ಘೋಷಿಸಿದ್ದಾರೆ.

ಪ್ರಮುಖ ಪಾತ್ರದಲ್ಲಿ ವಿಹಾನ್, ಸೋನಾಲ್ ಇದ್ದರೆ, ಇವರ ಜತೆಗೆ ಹಿರಿಯ ನಟರಾದ ರಂಗಾಯಣ ರಘುವಿನಂತಹ ಹಿರಿಯ ಕಲಾವಿದರೂ ಇದ್ದಾರೆ. ಒಟ್ಟಾರೆ ಮಾಸ್, ಮತ್ತು ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾ ಪಂಚತಂತ್ರ, ಒಮ್ಮೆ ನೋಡಲಡ್ಡಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ವೀಕೆಂಡ್ ಯಾವ ಚಾನೆಲ್ ತಿರುಗಿಸಿದ್ರೂ ಹಬ್ಬನೇ!