Publish Date: Thu, 28 Mar 2019 (09:38 IST)
Updated Date: Thu, 28 Mar 2019 (09:40 IST)
ಮಂಡ್ಯ: ಲೋಕಸಭೆ ಚುನಾವಣೆಗೆ ಪುತ್ರ ನಿಖಿಲ್ ಗೌಡ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಬಗ್ಗೆ ಸಿಎಂ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಂಬರೀಶ್ ಅಗಲಿಕೆಯ ನೋವಿನ ಛಾಯೆಯೂ ಸುಮಲತಾ ಮುಖದಲ್ಲಿ ಕಾಣ್ತಿಲ್ಲ. ಸುಮಲತಾ ಭಾಷಣ ನೋಡಿದರೆ ನಾಟಕೀಯ ಡೈಲಾಗ್ ಹೊಡೆಯುವಂತಿದೆ ಎಂದು ಸಿಎಂ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ 200 ಕ್ಕೂ ಹೆಚ್ಚು ರೈತ ಕುಟುಂಬದವರಿಗೆ ಆರ್ಥಿಕ ನೆರವು ನೀಡಿದ್ದೇವೆ. ಅದು ಮಜಾ ಮಾಡಲು ಅಲ್ಲ. ಇನ್ನೊಬ್ಬರಿಂದ ಹಣ ಪಡೆದು ಮಜಾ ಮಾಡೋರು ಇವರು ಎಂದು ಸುಮಲತಾರನ್ನು ಟೀಕಿಸಿದ್ದಾರೆ.
ಅಲ್ಲದೆ, ದರ್ಶನ್ ಮತ್ತು ಯಶ್ ರನ್ನು ಕಳ್ಳೆತ್ತುಗಳು ಎಂದು ನಾನು ಹೇಳಿಯೇ ಇರಲಿಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದೂ ಸಿಎಂ ಉಲ್ಟಾ ಹೊಡೆದಿದ್ದಾರೆ. ಇವರು ಶೋಕಿ ಎತ್ತುಗಳು ಎಂದಿದ್ದೆ. ಅವರೇ ಜೋಡೆತ್ತು ಎಂದು ಹೇಳಿಕೊಂಡಿರುವುದು ಎಂದು ಸಿಎಂ ಸಮಜಾಯಿಷಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ