Webdunia - Bharat's app for daily news and videos

Install App

ಸುದ್ದಿಗೋಷ್ಠಿಯಲ್ಲಿ ಪ್ರಜಾಕೀಯದ ಪರಿಕಲ್ಪನೆ ಬಿಚ್ಚಿಟ್ಟ ನಟ ಉಪೇಂದ್ರ

Webdunia
ಶನಿವಾರ, 12 ಆಗಸ್ಟ್ 2017 (14:24 IST)
ಅಂತೂ ಇಂತೂ ತಮ್ಮ ಸಿನಿಮಾಗಳ ಮೂಲಕ ರಾಜಕೀಯ ವ್ಯವಸ್ಥೆಯ ವಿಡಂಬನೆ ಮಾಡುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರುಪ್ಪೀಸ್ ರೆಸಾರ್ಟ್`ನಲ್ಲಿ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ ಜನಸೇವೆಯ ತಮ್ಮ ಪರಿಕಲ್ಪನೆಯನ್ನ ಮಾಧ್ಯಮಗಳ ಮುಂದಿಟ್ಟರು.

ನಮಗೆ ನಾಯಕರೂ ಬೇಡ, ಸೇವಕರೂ ಬೇಡ. ಕರ್ನಾಟಕದ ಜನ ಅಶಕ್ತರಲ್ಲ, ನಮಗೆ ಕಾರ್ಮಿಕರು ಬೇಕು, ಕೆಲಸ ಮಾಡುವವರು ಬೇಕು. ಹೀಗಾಗಿಯೇ ಖಾಕಿ ಹಾಕಿ ಕುಳಿತಿದ್ದೇನೆ ಎಂದು ಉಪೇಂದ್ರ ಹೇಳಿದರು.



ದುಡ್ಡಿನ ಬಲವಿಲ್ಲದೆ ರಾಜಕೀಯಕ್ಕೆ ಬರುವುದು ಸಾಧ್ಯವಿಲ್ಲವೆಂದು ಎಲ್ಲರೂ ಹೇಳುತ್ತಿದ್ದರು. ಪಾರ್ಟಿ ಫಂಡ್`ಗೆಂದು ದುಡ್ಡು  ಕೊಟ್ಟವರು ಅದನ್ನ ಹಿಂಪಡೆಯಲು ಏನಾದರೊಂದು ಕೇಳುತ್ತಾರೆ. ಇದರಿಂದ ಭ್ರಷ್ಟಾಚಾರ ಶುರುವಾಗುತ್ತೆ. ಹಾಗಾಗಿ, ಹಣದ ಸಹವಾಸವೇ ಇಲ್ಲದೆ ಪ್ರಜಾಕೀಯ ಮಾಡುವುದಾಗಿ ಹೇಳಿದ್ದಾರೆ. ಗೆಲ್ಲುತ್ತೇನೆಂಬ ಅಹಂಕಾರ, ಸೋಲುತ್ತೇನೆಂಬ ಭಯ ನನಗಿಲ್ಲ.  ಹೊಸ ಹೊಸ ಐಡಿಯಾ ಇರುವವರು ನಮ್ಮ ಜೊತೆ ಬನ್ನಿ ಎಂದು ಉಪೇಂದ್ರ ಕರೆ ನೀಡಿದ್ದಾರೆ.

ಹಣ, ಜಾತಿ ಮತ್ತು ತೋಳ್ಬಲದಿಂದ ಮುಕ್ತವಾದ ರಾಜಕೀಯ ಪ್ರಜಾಕೀಯ ಮಾಡುವುದಾಗಿ ಹೇಳಿದ ಉಪೇಂದ್ರ, ಜನರ ತೆರಿಗೆ ಹಣ ನೇರವಾಗಿ ಅವರಿಗೇ ತಲುಪಬೇಕು ಅದಕ್ಕಾಗಿ ನಾವೆಲ್ಲ ಸೇರಿ ಕೆಲಸ ಮಾಡಬೇಕು. ಇದಕ್ಕಾಗಿ ಹೊಸ ಹೊಸ ಐಡಿಯಾಗಳನ್ನ ಕೊಡುವಂತೆ ಕರೆ ನೀಡಿದ್ದಾರೆ. Prajakarana1@gmail.comPrajakarana2@gmail.comPrajakarana3@gmail.com ಎಂಬ ಇಮೇಲ್ ಐಡಿ ಕೊಟ್ಟಿರುವ ಉಪೇಂದ್ರ ಐಡಿಯಾ ಮತ್ತು ಅಭಿಪ್ರಾಯಗಳನ್ನ ಶೇರ್ ಮಾಡುವಂತೆ ಕೋರಿದ್ದಾರೆ.

ಯಾವುದೇ ಪಕ್ಷಕ್ಕೆ ಸೇರದೇ ಸ್ವತಂತ್ರ ಪಕ್ಷ ರಚಿಸುವುದಾಗಿ ಹೇಳಿರುವ ಉಪೇಂದ್ರ ಎಲ್ಲರ ಜೊತೆ ಚರ್ಚಿಸಿ ಪಕ್ಷವನ್ನ ಅಂತಿಮಗೊಳಿಸುವುದಾಗಿ ಉಪೇಂದ್ರ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments