Publish Date: Mon, 25 Jul 2022 (19:58 IST)
Updated Date: Mon, 25 Jul 2022 (20:01 IST)
ಗೋಲ್ಡನ್ ಸ್ಟಾರ್ ಗಣೇಶ್ & ಯೋಗರಾಜ್ ಭಟ್ ಕಾಂಬಿನೇಷನ್ ಸಿನಿಮಾ ಕುತೂಹಲ ಕೆರಳಿಸುತ್ತವೆ. ಸಿನಿಮಾದಲ್ಲಿ ಇವರಿಬ್ಬರ ರೊಮ್ಯಾಂಟಿಕ್ ಸ್ಟೋರಿ ಪರಿ ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆ. ಈಗ ಮತ್ತೆ ಈ ಜೋಡಿ ಒಂದಾಗಿದೆ. ಇವರೊಂದಿಗೆ ದಿಗಂತ್ ಹಾಗೂ ಪವನ್ ಕುಮಾರ್ ಕೂಡ ಜೊತೆಯಾಗಿದ್ದಾರೆ..ಈ ಬಾರಿ ರಾಜೇಶ್ ಕೃಷ್ಣನ್ ಒಬ್ಬರು ಮಿಸ್ಸಿಂಗ್ ಅಷ್ಟೇ. ಇಲ್ಲೂ ಕೂಡ ಇವರ ಹಾಡುಗಳ ಜರ್ನಿ ಮುಂದುವರೆದಿದೆ. ಭಟ್ಟರು ಮತ್ತೊಂದು ರೊಮ್ಯಾಂಟಿಕ್ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ..ಈಗ ಬಿಡುಗಡೆಯಾಗಿರುವ 'ಗಾಳಿಪಟ 2' ಚಿತ್ರದ ರೊಮ್ಯಾಂಟಿಕ್ ಸಾಂಗ್ ಕೂಡ ಸಂಗೀತ ಪ್ರಿಯರಿಗೆ ಇಷ್ಟ ಆಗುತ್ತಿದೆ..ಅರ್ಜುನ್ ಸಂಗೀತ ನೀಡಿರುವ ಈ ಸಿನಿಮಾದ ಹಾಡಿಗೆ ಇಂಡಿಯನ್ ಐಡಲ್‌ನಲ್ಲಿ ಭಾಗವಹಿಸಿ ಜನಮನಗೆದ್ದಿರೋ ಗಾಯಕ ನಿಹಾಲ್ ಟೌರೊ ಧ್ವನಿ ನೀಡಿದ್ದಾರೆ..ಪವನ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಕಾಂಬಿನೇಷನ್‌ನಲ್ಲಿ ಬಂದಿರೊ ಈ ಹಾಡನ್ನು ಕುದುರೆಮುಖದ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ.