ಅಸ್ಸಾಂ: ಲೆಜೆಂಡರಿ ಅಸ್ಸಾಮಿ ಗಾಯಕ ಮತ್ತು ಸಾಂಸ್ಕೃತಿಕ ಐಕಾನ್ ಜುಬೀನ್ ಗಾರ್ಗ್ ಅವರಿಗೆ ಅಂತಿಮವಾಗಿ ಬೀಳ್ಕೊಡಲು ಲಕ್ಷಗಟ್ಟಲೆ ಅಭಿಮಾನಿಗಳು ಬೀದಿಗಿಳಿದಿದ್ದರಿಂದ ಸೆಪ್ಟೆಂಬರ್ 21 ರಂದು ಗುವಾಹಟಿ ದುಃಖಮಯ ಕ್ಷಣಕ್ಕೆ ಸಾಕ್ಷಿಯಾಯಿತು.
ಅಂತಿಮಯಾತ್ರೆಯೂ ನಗರವನ್ನು ಶೋಕದ ಸಮುದ್ರವನ್ನಾಗಿ ಮಾಡಿತು. ಅಸ್ಸಾಂನಾದ್ಯಂತ ಮತ್ತು ಅದರಾಚೆಗಿನ ಅಭಿಮಾನಿಗಳು ಜುಬೀನ್‌ರನ್ನು ಅಂತಿಮವಾಗಿ ಕಣ್ತುಂಬಿಕೊಳ್ಳಲು ಜಮಾಯಿಸಿದ್ದರು.
ಲಕ್ಷಾಂತರ ಮಂದಿ ಅಂತಿಮ ಯಾತ್ರೆಯಲ್ಲಿ ಸೇರಿಕೊಳ್ಳುವ ಮೂಲಕ ಈ ಕ್ಷಣವು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಅತೀ ಹೆಚ್ಚು ಜನ ಪಾಲ್ಗೊಂಡ ಅಂತಿಮಯಾತ್ರೆ ಎಂದು ಅಧಿಕೃತವಾಗಿ ಹೇಳಿದೆ.
ಮೈಕೆಲ್ ಜಾಕ್ಸನ್, ಪೋಪ್ ಫ್ರಾನ್ಸಿಸ್ ಮತ್ತು ರಾಣಿ ಎಲಿಜಬೆತ್ II ಅವರ ಅಂತಿಮ ವಿದಾಯದ ಯಾತ್ರೆ ಬಳಿಕ ಅತೀ ಹೆಚ್ಚು ಭಾಗವಹಿಸಿದ ಅಂತಿಮ ಯಾತ್ರೆ ಜುಬೀನ್ ಬರ್ಗ್ ಅವರದ್ದಾಗಿದೆ. ವಿಶ್ವಾದ್ಯಂತ ನಾಲ್ಕನೇ ಅತಿದೊಡ್ಡ ಅಂತಿಮ ಯಾತ್ರೆ ಎಂದು ಪಟ್ಟಿ ಮಾಡಲಾಗಿದೆ.