Select Your Language

Notifications

webdunia
webdunia
webdunia
webdunia

ಕಾಂತಾರ ಚಾಪ್ಟರ್ 1 ಕನ್ನಡ ಟ್ರೈಲರ್ ಬಿಡುಗಡೆ ಮಾಡಲು ನಿಮಗೆ ಅವಕಾಶ: ಏನು ಮಾಡಬೇಕು ನೋಡಿ

Kantara chapter 1

Krishnaveni K

ಬೆಂಗಳೂರು , ಸೋಮವಾರ, 22 ಸೆಪ್ಟಂಬರ್ 2025 (10:39 IST)
ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾದ ಟ್ರೈಲರ್ ಇಂದು ಮಧ್ಯಾಹ್ನ 12.45 ಕ್ಕೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಕನ್ನಡ ಟ್ರೈಲರ್ ಬಿಡುಗಡೆಗೆ ಹೊಂಬಾಳೆ ಫಿಲಂಸ್ ಅಭಿಮಾನಿಗಳಿಗೇ ಅವಕಾಶ ನೀಡಿದೆ. ಈ ಟ್ರೈಲರ್ ನ್ನು ನೀವೇ ಬಿಡುಗಡೆ ಮಾಡುವುದು ಹೇಗೆ ಇಲ್ಲಿದೆ ಡೀಟೈಲ್ಸ್.

ಕಾಂತಾರ ಚಾಪ್ಟರ್ 1 ಟ್ರೈಲರ್ ನ್ನು ಪರ ಭಾಷೆಗಳಲ್ಲಿ ಆಯಾ ಭಾಷೆಗಳ ಸ್ಟಾರ್ ಗಳೇ ಬಿಡುಗಡೆ ಮಾಡುತ್ತಿದ್ದಾರೆ. ಹಿಂದಿಯಲ್ಲಿ ಹೃತಿಕ್ ರೋಷನ್, ತಮಿಳಿನಲ್ಲಿ ಶಿವ ಕಾರ್ತಿಕೇಯನ್, ತೆಲುಗಿನಲ್ಲಿ ಪ್ರಭಾಸ್, ಮಲಯಾಳಂನಲ್ಲಿ ಪೃಥ್ವಿ ರಾಜ್ ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರೆ.

ಆದರೆ ಕನ್ನಡದಲ್ಲಿ ಜನರೇ ಬಿಡುಗಡೆ ಮಾಡಲಿದ್ದಾರೆ ಎಂದು ಹೊಂಬಾಳೆ ಫಿಲಂಸ್ ಘೋಷಣೆ ಮಾಡಿದೆ. ಕನ್ನಡ ಜನರನ್ನೇ ನಮ್ಮನ್ನು ಇಷ್ಟರಮಟ್ಟಿಗೆ ಬೆಳೆಸಿದ್ದು. ಜನರೇ ಸ್ಟಾರ್ ಗಳು. ಅವರೇ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಎಂದಿದ್ದಾರೆ.

ಟ್ರೈಲರ್ ಬಿಡುಗಡೆ ಮಾಡಲು ಜನರಿಗೆ ಹೊಂಬಾಳೆ ಫಿಲಂಸ್ ಅವಕಾಶ ನೀಡಿದೆ. ಇದಕ್ಕಾಗಿ ನೀವು ಈ ಮೂರು ಸಿಂಪಲ್ ಕೆಲಸ ಮಾಡಿದರೆ ಸಾಕು. ಅದೇನದು ಇಲ್ಲಿದೆ ನೋಡಿ ವಿವರ.

-https://www.kantara.world/ ge ಗೆ ಭೇಟಿ ನೀಡಿ.
-ನಿಮ್ಮ ವಿವರಗಳನ್ನು ನೀಡಿ.
-ನಿಮ್ಮ ಬಿಡುಗಡೆ ಕಾರ್ಡ್ ಅನ್ನು ಡೌನ್ ಲೋಡ್ ಮಾಡಿ ಮತ್ತು ಹಂಚಿಕೊಳ್ಳಿ.

ಇಷ್ಟು ಮಾಡಿ ಕಾಂತಾರ ಟ್ರೈಲರ್ ಬಿಡುಗಡೆ ಮಾಡಿದ ಹೆಗ್ಗಳಿಕೆಗೆ ನೀವೂ ಪಾತ್ರರಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಚಾಪ್ಟರ್ 1 ಸಿನಿಮಾ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ: ಆ ಸೀನ್ ಇಲ್ಲೂ ಇರುತ್ತಾ