ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ರ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ಕಂಡುಬರುತ್ತಿದೆ. ಟ್ರೈಲರ್ ವಿಡಿಯೋ ಇಲ್ಲಿದೆ.
ಕಾಂತಾರ ಚಾಪ್ಟರ್ 1 ರಲ್ಲಿ ಮೊದಲ ಸಿನಿಮಾದ ಮುನ್ನುಡಿಯ ಕತೆ ಎಂದು ರಿಷಬ್ ಶೆಟ್ಟಿ ಹೇಳಿದ್ದರು. ಅದರಂತೆ ಇಲ್ಲಿ ದೈವಗಳ ಹುಟ್ಟು, ಮನುಷ್ಯರೊಂದಿಗಿನ ನಂಟಿನ ಕತೆ ಹೇಳಲಾಗಿದೆ. ರಿಷಬ್ ಶೆಟ್ಟಿ ಇಲ್ಲಿಯೂ ಬಂಡಾಯವೇಳುವ ಕಥಾನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಒಬ್ಬ ರಾಜ ಆತನ ವಿರುದ್ಧ ಬಂಡಾಯವೇಳುವ ಶಿವನಾಗಿ ಅಬ್ಬರಿಸಿದ್ದಾರೆ. ರಿಷಬ್ ಶೆಟ್ಟಿಯವರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಪ್ರಕಾಶ್ ತುಮಿನಾಡು, ಪ್ರಮೋದ್ ಶೆಟ್ಟಿ ಮೊದಲಾದವರು ಇಲ್ಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರುಕ್ಮಿಣಿ ವಸಂತ್ ರಾಣಿಯಾಗಿ ಕಾಣಿಸಿಕೊಂಡಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ಗಮನ ಸೆಳೆಯುತ್ತಿರುವುದು ಹಿನ್ನಲೆ ಸಂಗೀತ ಮತ್ತು ಅಬ್ಬರದ ದೃಶ್ಯ ಕಾವ್ಯ. ಟ್ರೈಲರ್ ನೋಡುತ್ತಿದ್ದರೆ ಈ ಸಿನಿಮಾ ಥಿಯೇಟರ್ ನಲ್ಲಿ ಧೂಳೆಬ್ಬಿಸುವುದು ಖಂಡಿತಾ ಎನಿಸುತ್ತದೆ. ಟ್ರೈಲರ್ ಲಿಂಕ್ ಇಲ್ಲಿದೆ ನೋಡಿ.