Select Your Language

Notifications

webdunia
webdunia
webdunia
webdunia

ಸ್ಕೂಬಾ ಡೈವಿಂಗ್ ವೇಳೆ ದುರಂತ, ಬಾಲಿವುಡ್‌ ಖ್ಯಾತ ಗಾಯಕ ಜುಬಿನ್ ಗರ್ಗ್ ಸಾವು

Assam Music Legend Zubeen Garg No More

Sampriya

ಗುವಾಹಟಿ , ಶುಕ್ರವಾರ, 19 ಸೆಪ್ಟಂಬರ್ 2025 (16:53 IST)
Photo Credit X
ಗುವಾಹಟಿ: ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್‌ ವೇಳೆ ಸಂಭವಿಸಿದ ಅಪಘಾತದಲ್ಲಿ ಅಸ್ಸಾಂ ಮೂಲದ ಬಾಲಿವುಡ್ ಗಾಯಕ ಜುಬಿನ್ ಗರ್ಗ್‌ ಸಾವನ್ನಪ್ಪಿದ್ದಾರೆ. ಜುಬಿನ್ ಅವರು‘ಈಶಾನ್ಯ ಭಾರತ ಹಬ್ಬ’ಕ್ಕೆ ಸೆ.20 ಹಾಗೂ 21ರಂದು ಪ್ರದರ್ಶನ್ ನೀಡಲು ತೆರಳಿದ್ದರು. 

ಜುಬಿನ್‌ ಸ್ಕೂಬಾ ಡೈವಿಂಗ್‌ ವೇಳೆ ಅಪಘಾತಕ್ಕೀಡಾಗಿದ್ದಾರೆ. ಸಮುದ್ರದಿಂದ ಹೊರಕರೆತಂದು ಅವರಿಗೆ ಸಿಪಿಆರ್‌ ನೀಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ತಪಾಸಣೆ ಮಾಡಿದ ವೈದ್ಯರು ಈಗಾಗಲೇ ಸಾವನ್ನಪ್ಪಿರುವುದಾಗಿ ಸಿಂಗಪುರ ಜನರಲ್‌ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 

ಜುಬಿನ್ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸಿರುವ ಅಸ್ಸಾಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಶೋಕ್ ಸಂಘಲ್‌ ಅವರು, ‘ನಮ್ಮ ಪ್ರೀತಿಯ ಜುಬಿನ್ ಗರ್ಗ್‌ ಸಾವು ಅತೀವ ದುಃಖ ತಂದಿದೆ. ಅಸ್ಸಾಂ ಕೇವಲ ಧ್ವನಿಯನ್ನು ಕಳೆದುಕೊಂಡಿಲ್ಲ, ಹೃದಯಬಡಿತವನ್ನು ಕಳೆದುಕೊಂಡಿದೆ. ಜುಬಿನ್ ಕೇವಲ ಗಾಯಕರಲ್ಲ ಅಸ್ಸಾಂ ಮತ್ತು ದೇಶದ ಹೆಮ್ಮೆ’ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ದಿಢೀರ್ ಸಾವನ್ನಪ್ಪಿದ ತಮಿಳು ನಟ ರೋಬೋ ಶಂಕರ್‌ ಸಾವಿಗೆ ಕಾರಣವೇನು ಗೊತ್ತಾ