Publish Date: Sun, 20 Dec 2020 (09:18 IST)
Updated Date: Sun, 20 Dec 2020 (09:21 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ರೊಮ್ಯಾಂಟಿಕ್ ಹಾಡೊಂದು ಡಿಸೆಂಬರ್ 25 ರಂದು ಕ್ರಿಸ್ ಮಸ್ ದಿನ ಬಿಡುಗಡೆಯಾಗಲಿದೆ.
ಯುವರತ್ನ ಸಿನಿಮಾದ ಪವರ್ ಆಫ್ ಯೂಥ್ ಹಾಡು ಈಗಾಗಲೇ ಬಿಡುಗಡೆಯಾಗಿ ಭಾರೀ ಹಿಟ್ ಆಗಿದೆ. ಇದೀಗ ಚಿತ್ರತಂಡ ಎರಡನೇ ಹಾಡು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಬಾರಿ ಸ್ವತಃ ಪವರ್ ಸ್ಟಾರ್ ವಾಯ್ಸ್ ನೀಡಿದ್ದ ಊರಿಗೊಬ್ಬ ರಾಜ ಹಾಡು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಚಿತ್ರತಂಡ ರೊಮ್ಯಾಂಟಿಕ್ ಹಾಡೊಂದನ್ನು ಬಿಡುಗಡೆ ಮಾಡುತ್ತಿದೆ. ನೀನಾದೆ ನಾ ಎಂಬ ಹಾಡು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ತಮನ್ ಎಸ್ ಸಂಗೀತ ನಿರ್ದೇಶಿಸಿದ್ದಾರೆ.