Publish Date: Fri, 09 Apr 2021 (10:37 IST)
Updated Date: Fri, 09 Apr 2021 (10:38 IST)
ಬೆಂಗಳೂರು: ಇಂದಿನಿಂದ ಒಟಿಟಿ ಫಾರ್ಮ್ಯಾಟ್ ನಲ್ಲಿ ಯುವರತ್ನ ಬಿಡುಗಡೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಅಭಿಮಾನಿಗಳಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ವ್ಯಾಪಾರದ ದೃಷ್ಟಿಯಿಂದ ಕೆಲವೊಂದು ಹೊಸ ನಿರ್ಧಾರ ತೆಗೆದುಕೊಳ್ಳಲೇಬೇಕಾಗಿದೆ. ಸದ್ಯಕ್ಕೆ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶವಿರುವುದರಿಂದ ಚಿತ್ರಮಂದಿರವೊಂದರಿಂದಲೇ ಲಾಭ ಗಳಿಕೆ ಸಾಧ್ಯವಿಲ್ಲ. ಈ ಕಾರಣಕ್ಕೆ ಸಿನಿಮಾ ಎಲ್ಲರಿಗೂ ತಲುಪಲಿ ಎಂದು ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆ ಮಾಡಿರುವುದಾಗಿ ಪುನೀತ್ ಹೇಳಿದ್ದಾರೆ.
ಬಿಡುಗಡೆಯಾದ ಒಂದೇ ವಾರಕ್ಕೆ ಯುವರತ್ನ ಅಮೆಝೋನ್ ಪ್ರೈಮ್ ನಲ್ಲಿ ರಿಲೀಸ್ ಆಗಿರುವುದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಇದರಿಂದ ತೆಲುಗು ಭಾಷೆಯ ವಕೀಲ್ ಸಾಬ್ ಗೆ ನಾವೇ ದಾರಿ ಮಾಡಿಕೊಟ್ಟಂತಾಗಿದೆ ಎನ್ನುವುದು ಪುನೀತ್ ಅಭಿಮಾನಿಗಳ ಬೇಸರ.