Select Your Language

Notifications

webdunia
webdunia
webdunia
webdunia

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಎಕ್ಕ ಕನ್ನಡ ಸಿನಿಮಾ

Sampriya

ಬೆಂಗಳೂರು , ಭಾನುವಾರ, 6 ಜುಲೈ 2025 (16:33 IST)
Photo Credit X
ಬ್ಯಾಂಗಲ್ ಬಂಗಾರಿ ಸಿನಿಮಾ ಮೂಲಕ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟ ಯುವ ರಾಜ್‌ಕುಮಾರ್ ಅಭಿನಯದ ಎಕ್ಕ ಸಿನಿಮಾ ಇದೇ 18ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ. ಇದೀಗ ಸಿನಿಮಾ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ನಟ ಯುವ ರಾಜ್‌ಕುಮಾರ್‌ ಅವರು ರಾಯರ ದರ್ಶನ ಪಡೆದಿದ್ದಾರೆ. 

ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಬಳಿಕ ರಾಯಚೂರಿನ  ಹನುಮಾನ್‌ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಈ ವೇಳೆ ರಾಯಚೂರಿನಲ್ಲಿ ಮಾಧ್ಯಮದವೊಂದಿಗೆ ಮಾತನಾಡಿದ ಅವರು, ನಾವು ಹೊಸ ಕೆಲಸ ಶುರು ಮಾಡೋದಕ್ಕೂ ಮುನ್ನ ಮಂತ್ರಾಲಯ ರಾಯರ ದರ್ಶನ ಮಾಡ್ತೇವೆ. ಎಕ್ಕ ಸಿನಿಮಾ ಶುರುವಾಗೋ ಮುನ್ನ ಕೂಡಾ ಮಂತ್ರಾಲಯದಲ್ಲಿ ಪೂಜೆ ಮಾಡಿಸಲಾಗಿತ್ತು. ರಾಯರೇ ದೊಡ್ಡ ಧೈರ್ಯ ನಮಗೆ. ರಾಯಚೂರಿನಲ್ಲಿ ಆಂಜನೇಯ ಸ್ವಾಮಿ ದರ್ಶನ ಸಹ ಪಡೆದಿದ್ದೇನೆ ಎಂದಿದ್ದಾರೆ

ಮನುಷ್ಯನಲ್ಲಿ ಒಳ್ಳೆತನ ಕಾಪಾಡಿಕೊಳ್ಳಬೇಕು ಅನ್ನೋದೇ ಎಕ್ಕ ಸಿನಿಮಾದ ಸಂದೇಶ. ಜಾಕಿ ಸಿನಿಮಾ ಪಾತ್ರಗಳಿಂದ ಪ್ರೇರಿತರಾಗಿ ಈ ಚಿತ್ರವನ್ನು ಮಾಡಿದ್ದೇವೆ. ಬ್ಯಾಂಗಲ್ ಬಂಗಾರಿ ಹಾಡು ಹಿಟ್ ಆಗಿದೆ, ಇದಕ್ಕೆಲ್ಲಾ ದೇವರ ಆಶೀರ್ವಾದವೇ ಕಾರಣ ಸಂತಸ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ