Select Your Language

Notifications

webdunia
webdunia
webdunia
webdunia

ಪುನೀತ್ 3ನೇ ಪುಣ್ಯಸ್ಮರಣೆ: ನಿಮ್ಮ ಅಭಿಮಾನಿ ಎಂದ ದೊಡ್ಮನೆ ಸೊಸೆಯ ಪೋಸ್ಟ್ ವೈರಲ್

ಪುನೀತ್ 3ನೇ ಪುಣ್ಯಸ್ಮರಣೆ: ನಿಮ್ಮ ಅಭಿಮಾನಿ ಎಂದ ದೊಡ್ಮನೆ ಸೊಸೆಯ ಪೋಸ್ಟ್ ವೈರಲ್

Sampriya

ಬೆಂಗಳೂರು , ಮಂಗಳವಾರ, 29 ಅಕ್ಟೋಬರ್ 2024 (17:29 IST)
Photo Courtesy X
ಇಂದಿಗೆ ನಗುವಿನ ಒಡೆಯ, ನಟ ಪುನೀತ್ ರಾಜ್‌ಕುಮಾರ್ ಅವರು ನಮ್ಮನಗಲಿ ಮೂರು ವರ್ಷ. ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಇಂದು ನೆರವೇರಿದೆ. ಅವರ ಸಮಾಧಿ ಬಳಿ ಪತ್ನಿ ಅಶ್ವಿನಿ, ಮಗಳು ಹಾಗೂ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಇನ್ನೂ ಸಹಸ್ರಾರು ಅಭಿಮಾನಿಗಳು ಪುನೀತ್‌ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.  

ಇನ್ನೂ ರಾಘವೇಂದ್ರ ರಾಜ್‌ಕುಮಾರ್ ಅವರ ಸೊಸೆ ಶ್ರೀದೇವಿ ಭೈರಪ್ಪ ಅವರು ಪುನೀತ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅಪ್ಪು ಪುಣ್ಯಸ್ಮರಣೆ ದಿನವನ್ನು ಶ್ರೀದೇವಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಸ್ಮರಿಸಿದ್ದಾರೆ.

ಅಪ್ಪು ಈ ಹಿಂದೆ ಹಾಡಿರುವ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿ ಬರೆದುಕೊಂಡಿದ್ದಾರೆ.

ಚಿಕ್ಕದಿನಿಂದಲೂ ಅಪ್ಪು ಸಿನಿಮಾ ನೋಡಿ ಬೆಳೆದಿದ್ದೇನೆ. ಆದರೆ ಕಳೆದ ಮೂರು ವರ್ಷಗಳಿಂದ ನಾನು ಯಾವುದೇ ಚಿತ್ರವನ್ನು ನೋಡಿಲ್ಲ. ನೀವಿಲ್ಲದ ಸಿನಿಮಾ ನೋಡುವ ಅನುಭವ ನಿಜಕ್ಕೂ ಘಾಸಿ ಮಾಡುತ್ತಿದೆ. ಮಿಸ್‌ ಯೂ..ನಿಮ್ಮ ಅಭಿಮಾನಿ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಸದ್ಯ ಉನ್ನತ ಶಿಕ್ಷಣಕ್ಕಾಗಿ ಶ್ರೀದೇವಿ ಭೈರಪ್ಪ ಅವರು ಅಮೆರಿಕಾದಲ್ಲಿದ್ದಾರೆ.

ಇನ್ನೂ ಶ್ರೀದೇವಿ ಹಾಗೂ ಯುವರಾಜ್‌ಕುಮಾರ್‌ ಅವರ ವಿಚ್ಛೇದನದ ಸುದ್ದಿ ಎಲ್ಲರಿಗೂ ಶಾಕ್ ನೀಡಿತ್ತು. ಯುವರಾಜ್‌ಕುಮಾರ್‌ ಹಾಗೂ ಶ್ರೀದೇವಿ ಬೈರಪ್ಪ ದಂಪತಿ ಡಿಪೋರ್ಸ್‌ ಪಡೆಯಲು ಮುಂದಾಗಿದ್ದಾರೆ ಎಂದು ಎಲ್ಲೆಡೆಯೂ ಸುದ್ದಿ ಹರಿದಾಡಿತ್ತು. ಅಲ್ಲದೆ ಯುವ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದೂ ಹೇಳಲಾಗಿತ್ತು.

ಬಳಿಕ ಶ್ರೀದೇವಿ ಅವರೂ ಸೋಶಿಯಲ್‌ ಮೀಡಿಯಾದಲ್ಲೇ ಪತಿ ಯುವ ರಾಜ್‌ಕುಮಾರ್‌ ವಿರುದ್ಧ ಹಲವು ಶಾಕಿಂಗ್‌ ವಿಚಾರಗಳನ್ನು ಹೇಳಿದ್ದರು. ಕೆಲವು ಗಂಭೀರ ಆರೋಪಗಳನ್ನೂ ಮಾಡಿದ್ದರು. ಇದು ದೊಡ್ಮನೆ ಕುಟುಂಬದಲ್ಲಿ ಬಿರುಕು ಎಂದೇ ಎಲ್ಲೆಡೆ ಸದ್ದು ಮಾಡಿತ್ತು. ಬಳಿಕ ಈ ವಿಚಾರ ತಣ್ಣಗಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಸಮಸ್ಯೆ ಮುಂದಿಟ್ಟು ಜಾಮೀನು ಕೇಳಿದ ದರ್ಶನ್ ಗೆ ದೀಪಾವಳಿ ಧಮಾಕಾ ಪಕ್ಕಾ