Select Your Language

Notifications

webdunia
webdunia
webdunia
webdunia

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

Bhavana Ramanna

Krishnaveni K

ಬೆಂಗಳೂರು , ಶನಿವಾರ, 5 ಜುಲೈ 2025 (14:22 IST)
ಬೆಂಗಳೂರು: ಮಕ್ಕಳಾಗಲು ಹೆಣ್ಣಿಗೆ ಮದುವೆಯೇ ಆಗಬೇಕೆಂದು ಇದ್ಯಾ? ಪ್ರಾಣಿ ಪಕ್ಷಿಗಳಿಗೆಲ್ಲಾ ಮದುವೆಯಾಗುತ್ತಾ? ಹೀಗಂತ ಐವಿಎಫ್ ಮೂಲಕ ಮದುವೆಯಾಗದೇ ಅವಳಿ ಮಕ್ಕಳ ನಿರೀಕ್ಷೆಯಲ್ಲಿರುವ ನಟಿ ಭಾವನಾ ರಾಮಣ್ಣ ಪ್ರಶ್ನೆ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನಟಿ ಭಾವನಾ ರಾಮಣ್ಣ ಐವಿಎಫ್ ಮೂಲಕ ಅವಳಿ ಮಕ್ಕಳ ನಿರೀಕ್ಷೆಯಲ್ಲಿರುವುದಾಗಿ ಸುದ್ದಿ ಹಂಚಿಕೊಂಡು ಬಹುತೇಕರು ಅಚ್ಚರಿಗೊಂಡಿದ್ದರು. ಭಾವನಾಗೆ ಮದುವೆಯಾಗಿಲ್ಲ. ಈ ಮಗು ಮಾಡಿಕೊಳ್ಳುವ ಬಯಕೆಯಾಗಿದ್ದು ಯಾಕೆ ಎಂದು ಅಚ್ಚರಿಪಟ್ಟುಕೊಂಡಿದ್ದರು.

ಆದರೆ ಇದಕ್ಕೆ ಸ್ಪಷ್ಟನೆ ನೀಡಿದ್ದ ಅವರು ನನಗೀಗ 40 ನೆಯ ವಯಸ್ಸು. ಈಗ ತಾಯಿಯಾಗಲೇಬೇಕೆಂಬ ತುಡಿತ ಹೆಚ್ಚಾಯ್ತು. ಅದಕ್ಕೇ ಈ ನಿರ್ಧಾರ ಮಾಡಿದ್ದೆ ಎಂದಿದ್ದಾರೆ. ಆದರೆ ಈಗ ಖಾಸಗಿ ವಾಹಿನಿ ಜೊತೆಗಿನ ಸಂದರ್ಶನದಲ್ಲಿ ಮಗು ಮಾಡಿಕೊಳ್ಳುತ್ತಿರುವುದರ ಬಗ್ಗೆ ನೇರ ಮಾತನಾಡಿದ್ದಾರೆ.

ಮಗು ಮಾಡಿಕೊಳ್ಳಲು ಹೆಣ್ಣಿಗೆ ಮದುವೆಯಾಗಲೇ ಬೇಕು ಎಂಬುದು ತಪ್ಪು ಕಲ್ಪನೆ. ತಾಯ್ತನ ಎನ್ನುವುದು ಹೆಣ್ಣಿಗೆ ಪ್ರಾಕೃತಿಕವಾಗಿ ಬಂದಿದ್ದು. ಈಗೆಲ್ಲಾ ದನಗಳಿಗೂ ಇಂಜೆಕ್ಷನ್ ಮುಖಾಂತರ ಗರ್ಭಧಾರಣೆ ಮಾಡುತ್ತಿದ್ದಾರೆ. ಪ್ರಾಣಿ-ಪಕ್ಷಿಗಳೂ ಮರಿ ಹಾಕುತ್ತವೆ. ಹಾಗಂತ ಅವುಗಳಿಗೆ ಮದುವೆಯಾಗಿದೆಯಾ ಎಂದು ನಾವು ಕೇಳುತ್ತೇವಾ? ಹಾಗಿರುವಾಗ ಮನುಷ್ಯನಿಗೆ ಯಾಕೆ ಈ ಕಟ್ಟಲೆಗಳು ಇರಬೇಕು ಎಂದು ಭಾವನಾ ಖಡಕ್ ಆಗಿ ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಮುಂದಿನ ಸಿನಿಮಾಗೆ ವರ್ಷಗಟ್ಟಲೆ ತೆಗೆದುಕೊಳ್ಳಲ್ಲ: ಹೊಸ ಟ್ರೆಂಡ್ ಶುರು ಮಾಡ್ತಾರಾ ಕಿಚ್ಚ