ಮುಂಬೈ: ಕೊಡವ ಸಮುದಾಯದಿಂದ ಸಿನಿಮಾಗೆ ಬಂದ ಮೊದಲ ನಟಿ ನಾನೇ ಎಂದು ನಟಿ ರಶ್ಮಿಕಾ ಮಂದಣ್ಣ ವಿವಾದಿತ ಹೇಳಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುವಾಗ ರಶ್ಮಿಕಾ ಈ ಎಡವಟ್ಟು ಮಾಡಿದ್ದಾರೆ. ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ರಶ್ಮಿಕಾ ಈಗ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದ್ದಾರೆ. ಕೊಡವ ಸಮುದಾಯದಿಂದ ಅನೇಕ ನಟಿರಯುರು ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ರಶ್ಮಿಕಾ ಯಾಕೆ ಹೀಗೆ ಹೇಳಿದರೋ ಗೊತ್ತಾಗಿಲ್ಲ.
ಕೊಡವ ಸಮುದಾಯದಿಂದ ಸಿನಿಮಾಗೆ ಬಂದವಳು ನಾನೇ ಎಂದು ರಶ್ಮಿಕಾ ಹೇಳಿದಾಗ ಸಂದರ್ಶಕರು ನೀವೇ ಮೊದಲು ಎಂದು ಜನ ನಿರ್ಧರಿಸಿದ್ದಾರಾ ಎಂದು ಕೇಳಿದ್ದಾರೆ. ಇದಕ್ಕೆ ರಶ್ಮಿಕಾ ಹೌದು ಕೊಡವ ಸಮುದಾಯದವರು ನಿರ್ಧರಿಸಿದ್ದಾರೆ ಎಂದಿದ್ದಾರೆ.
ರಶ್ಮಿಕಾ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಸ್ಯಾಂಡಲ್ ವುಡ್ ಹಿರಿಯ ನಟಿ ಪ್ರೇಮಾರಿಂದ ಹಿಡಿದು ಇತ್ತೀಚೆಗಿನ ಹರ್ಷಿಕಾ ಪೂಣಚ್ಚ, ಶುಭ್ರ ಅಯ್ಯಪ್ಪ ಸೇರಿದಂತೆ ಅನೇಕರು ಕೊಡವ ಸಮುದಾಯದವರು. ಹೀಗಿರುವಾಗ ರಶ್ಮಿಕಾ ಯಾವ ಅರ್ಥದಲ್ಲಿ ತಾವೇ ಮೊದಲಿಗರು ಎಂದು ಹೇಳಿಕೊಂಡರು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.