ಯುವಕರ ಮನಸ್ಸನ್ನ ಕಿವುಚಿದ 'ತೋತಾಪುರಿ' ಟ್ಯಾಗ್ ಲೈನ್..!

Webdunia
ಶನಿವಾರ, 28 ಮಾರ್ಚ್ 2020 (20:30 IST)
ತೋತಾಪುರಿ' ಟೈಟಲ್ ಮೂಲಕವೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ. 'ನೀರ್ ದೋಸೆ' ಚಿತ್ರದ ನಂತರ ನಿರ್ದೇಶಕ ವಿಜಯ್ ಪ್ರಸಾದ್ ಕೈಗೆತ್ತಿಕೊಂಡಿರುವ ಸಿನಿಮಾ 'ತೋತಾಪುರಿ'. ಈಗಾಗಲೇ ಎರಡು ಭಾಗಗಳ ಚಿತ್ರೀಕರಣವನ್ನು ಒಮ್ಮೆಲೆ ಮುಗಿಸಿಕೊಂಡಿರುವ ಚಿತ್ರತಂಡ ರಿಲೀಸ್ ಗೆ ರೆಡಿಯಾಗಿದೆ.
ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಕಾಮನ್ ಆಗಿ ಸೀಕ್ವೆನ್ಸ್ ಸಿನಿಮಾಗಳು ಬಂದ್ರೆ ಅದೇ ಹೆಸರಿನ ಭಾಗ-1,2 ಎಂಬಂತೆ ಬರುತ್ತವೆ. ಆದ್ರೆ 'ತೋತಾಪುರಿ' ಎಲ್ಲವಕ್ಕೂ ಭಿನ್ನವಾಗಿದೆ. ಭಿನ್ನ ಶಿರ್ಷಿಕೆಗಳು, ವಾವ್ ಎನ್ನುವ ಶೀರ್ಷಿಕೆಗಳನ್ನು ನಾವೂ ಕೇಳಿದ್ದೇವೆ. 'ತೋತಾಪುರಿ'ಯಲ್ಲಿ ಟ್ಯಾಗ್ ಲೈನ್ ಎಲ್ಲರ ಕಣ್ಣನ್ನ ಅರಳಿಸಿವೆ. ಮನಸ್ಸಲ್ಲೆ ನಗಿಸುವಂತೆ ಮಾಡುತ್ತಿದೆ. ಏನಿರಬಹುದೆಂಬ ಸಣ್ಣ ಕುತೂಹಲ ಮೂಡುವಂತೆ ಮಾಡುತ್ತಿದೆ. ಒಂದೇ ಶೀರ್ಷಿಕೆ ಇಟ್ಟುಕೊಂಡು ಸಬ್ ಟೈಟಲ್ ಬದಲಾಯಿರುವ ಸಿನಿಮಾ. ಮೊದಲ ಭಾಗದಲ್ಲಿ 'ತೊಟ್ಟು ಕೀಳ್ಬೇಕು' ಎಂಬ ಟ್ಯಾಗ್ ಲೈನ್ ಎರಡನೇ ಭಾಗದಲ್ಲಿಾ 'ತೋತಾಪುರಿ' 'ತೊಟ್ಟು ಕಿತ್ತಾಯ್ತು' ಎಂಬಂತಿದೆ. ಟ್ಯಾಗ್ ಲೈನ್ ಕಥೆ ಅರ್ಥ ಮಾಡಿಸಿದ್ರು, ಏನೇನೋ ಕುತೂಹಲ ಹುಟ್ಟಿಸಿದೆ. ಈ ರೀತಿಯ ಕ್ಯಾಚಿ ಟ್ಯಾಗ್ ಲೈನ್ ನಿಂದ ಯುವಕರ ಮನಸ್ಸನ್ನ ಹಾಗೇ ಕಿವುಚಿ ಹಾಕಿದೆ.
 
ಸಿನಿಮಾ ಯಾವಾಗ ತೆರೆಗ ಬರುತ್ತೆ ಅಂತ ಪೋಸ್ಟರ್ ನೋಡಿದವರು ಕಾಯ್ತಾ ಇದ್ದಾರೆ. ಅದರಲ್ಲೂ 'ನೀರ್ ದೋಸೆ' ಕಾಂಬಿನೇಷನ್ ಮತ್ತೊಂದು ಕಡೆ ಹುಡುಗರ ಮನಸ್ಸನ್ನ ಸಿನಿಮಾಗಾಗಿ ಹಾತೊರೆಯುತ್ತಿದೆ. ಸಿನಿಮಾ ಕಂಪ್ಲೀಟ್ ಮನರಂಜನೆಯಿಂದ ಕೂಡಿದ್ದು, ಜಗ್ಗೇಶ್ ಕಾಮಿಡಿ ಎಲ್ಲರನ್ನು ನಗಿಸಲಿದೆ.
ಕಾಮಿಡಿ ಸಿನಿಮಾಗಳಲ್ಲೇ ಮೊದಲ ಬಾರಿಗೆ ಸೀಕ್ವೇನ್ಸ್ ಬರ್ತಾ ಇರೋದು ಅನ್ನೋದು ಮತ್ತೊಂದು ವಿಶೇಷತೆ. ಸಿನಿಮಾದಲ್ಲಿ 80 ಕ್ಕೂ ಹೆಚ್ಚು ತಾರಾಬಳಗವಿದೆ. ಮೇಕಿಂಗ್, ಶೂಟಿಂಗ್ ಅಂತೆಲ್ಲಾ ಯಾವುದಕ್ಕೂ ಕಾಂಪ್ರೂಮೈಸ್ ಆಗದೆ ದೊಡ್ಡ ಮಟ್ಟದಲ್ಲಿ ಒಂದು ಕಾಮಿಡಿ ಸಿನಿಮಾವನ್ನು ರೆಡಿ ಮಾಡಿರುವ ಮೊದಲ ಸಿನಿಮಾವಿದು. ಇಂತ ಹೊಸ ಸಾಹಸಕ್ಕೆ ನಿರ್ಮಾಪಕ ಕೆ. ಎ ಸುರೇಶ್ ಕೈ ಹಾಕಿದ್ದಾರೆ.
ಮೈಸೂರು, ಶ್ರೀರಂಗಪಟ್ಟಣ, ಕೂರ್ಗ್ ಸೇರಿದಂತೆ ಸುಂದರ ಜಾಗಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡಿದೆ. ಅನೂಪ್ ಸೀಳಿನ್ ಸಂಗೀತ ನೀಡಿ್ದ್ದುದ್ದು, ಸುರೇಶ್ ಅರಸ್ ಸಂಕಲನ ಮಾಡಿದ್ದಾರೆ. ನಿರಂಜನ್ ಬಾಬು ಕ್ಯಾಮೆರಾದಲ್ಲಿ ಸಮದರ ದೃಶ್ಯಗಳು ಸೆರೆಯಾಗಿವೆ.
 
ನೀರ್ ದೋಸೆ ಚಿತ್ರದ ಕಮಾಲ್ ಮಾಡಿದ್ದ ಜಗ್ಗೇಶ್ ಮತ್ತೆ ವಿಜಯ್ ಪ್ರಸಾದ್ ಜೊತೆ 'ತೋತಾಪುರಿ' ಚಿತ್ರದಲ್ಲೂ ಒಂದಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಜಗ್ಗೇಶ್ ಮಿಂಚಿದ್ದಾರೆ. ಸುಮನ್ ರಂಗನಾಥ್, ಅದಿತಿ ಪ್ರಭುದೇವ ಮತ್ತು ಡಾಲಿ ಧನಂಜಯ್ ತೋತಾಪುರಿ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಕೆ.ಎ ಸುರೇಶ್ ಬಂಡವಾಳ ಹೂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

BBK12: ನಿಮಗೆ ಗೌರವ ಬೇಕು ಅಂದ್ರೆ ಬೇರೆಯವರಿಗೂ ಕೊಡೋದನ್ನು ಕಲಿಯಿರಿ: ಅಶ್ವಿನಿಗೆ ಕಿಚ್ಚ ಸುದೀಪ್ ಕ್ಲಾಸ್ video

ಮುಂದಿನ ಸುದ್ದಿ
Show comments