Select Your Language

Notifications

webdunia
webdunia
webdunia
webdunia

ಗಾಳಿಪಟ 2 ಜೋಡಿ ಜೀವಗಳ ಪರಿಚಯ ಮಾಡಿದ ಯೋಗರಾಜ್ ಭಟ್

ಗಾಳಿಪಟ 2 ಜೋಡಿ ಜೀವಗಳ ಪರಿಚಯ ಮಾಡಿದ ಯೋಗರಾಜ್ ಭಟ್
ಬೆಂಗಳೂರು , ಬುಧವಾರ, 23 ಅಕ್ಟೋಬರ್ 2019 (08:38 IST)
ಬೆಂಗಳೂರು: ಯೋಗರಾಜ್ ಭಟ್ ತಮ್ಮ ಗಾಳಿಪಟ 2 ಸಿನಿಮಾ ಕೆಲಸಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಹಲವು ದಿನಗಳ ಹಿಂದೆಯೇ ಚಿತ್ರಕ್ಕೆ ಚಾಲನೆ ನೀಡಿದ್ದರೂ ಇನ್ನೂ ಚಿತ್ರೀಕರಣ ಆರಂಭವಾಗಿಲ್ಲ.


ಅದಕ್ಕೆ ಉತ್ತರ ಕರ್ನಾಟಕದಲ್ಲಿ ಗುರುತಿಸಲಾಗಿದ್ದ ಲೊಕೇಷನ್ ಗಳಲ್ಲಿ ನೆರೆ ಪರಿಸ್ಥಿತಿ ಇದ್ದಿದ್ದೇ ಕಾರಣ ಎನ್ನಲಾಗಿದೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭಿಸಲು ಭಟ್ಟರು ಯೋಜನೆ ಮಾಡಿದ್ದಾರೆ.

ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜತೆಗೆ ದಿಗಂತ್, ಪವನ್ ‍ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಇವರಿಗೆ ನಾಯಕಿಯರು ಯಾರು ಎಂಬ ಪ್ರಶ್ನೆಗೆ ಹಲವು ಹೆಸರುಗಳು ಬಂದು ಹೋದವು. ಇದೀಗ ಅಧಿಕೃತವಾಗಿ ಭಟ್ಟರು ತಮ್ಮ ಹೀರೋಗಳಿಗೆ ಜೋಡಿ ಯಾರು ಎಂಬುದನ್ನು ಪ್ರಕಟಿಸಿದ್ದಾರೆ. ಗಣೇಶ್ ಜೋಡಿಯಾಗಿ ವೈಭವಿ ಶಾಂಡಿಲ್ಯ, ದಿಗಂತ್ ಗೆ ಸಂಯುಕ್ತ ಮೆನನ್, ಪವನ್ ಗೆ ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.  ಅದೂ ಸಂಭಾವ್ಯ ನಾಯಕಿಯರು ಎಂದು ಭಟ್ಟರು ಪಟ್ಟಿ ಕೊಟ್ಟಿದ್ದಾರೆ. ಹೀಗಾಗಿ ಕೊನೆ ಕ್ಷಣದಲ್ಲಿ ಈ ಪಟ್ಟಿ ಬದಲಾದರೂ ಅಚ್ಚರಿಯಿಲ್ಲ!

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಸಾಕಾಗಿದೆ! ಎಂದು ಕೋಟ್ ಬಿಚ್ಚಿ ಹೊರನಡೆದ ಸಲ್ಮಾನ್ ಖಾನ್!