Publish Date: Tue, 22 Oct 2019 (09:40 IST)
Updated Date: Tue, 22 Oct 2019 (12:04 IST)
ಬೆಂಗಳೂರು: ರ್ಯಾಪರ್ ಚಂದನ್ ಶೆಟ್ಟಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ನಿವೇದಿತಾ ಗೌಡ ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾಗಿದೆ.
ಯುವ ದಸರಾದಲ್ಲಿ ಈ ಜೋಡಿ ಪ್ರಪೋಸ್ ಮಾಡಿದ್ದಕ್ಕೇ ಟೀಕೆಗೆ ಗುರಿಯಾಗಿದ್ದರು. ಇದೀಗ ನಿಶ್ಚಿತಾರ್ಥದ ಮೊದಲು ನಿವೇದಿತಾ ಗೌಡ ನೀಡಿರುವ ಹೇಳಿಕೆಯೊಂದು ಟ್ರೋಲ್ ಗೊಳಗಾಗಿದೆ.
ನಿಶ್ಚಿತಾರ್ಥದ ಸಂಪ್ರದಾಯಗಳೆಲ್ಲಾ ನನಗೆ ಹೊಸದು ಎಂದು ನಿವೇದಿತಾ ಹೇಳಿದ್ದನ್ನು ಮಾಧ್ಯಮವೊಂದು ವರದಿ ಮಾಡಿತ್ತು. ಇದನ್ನು ಉಲ್ಲೇಖಿಸಿ ನಿವೇದಿತಾರನ್ನು ಟ್ರೋಲ್ ಮಾಡಿರುವ ನೆಟ್ಟಿಗರು ಎಲ್ಲರೂ ಜೀವನದಲ್ಲಿ 25-30 ಬಾರಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರಾ? ಎಲ್ಲರಿಗೂ ನಿಶ್ಚಿತಾರ್ಥದ ಸಂಭ್ರಮ ಜೀವನದಲ್ಲಿ ಒಮ್ಮೆಯೇ ಬರೋದು? ಇನ್ನೆಷ್ಟು ಬಾರಿ ಅನುಭವ ಆಗಬೇಕು ನಿಮಗೆ? ಎಂದು ನಿವೇದಿತಾರನ್ನು ಹಿಗ್ಗಾ ಮುಗ್ಗಾ ಕಾಲೆಳೆದಿದ್ದಾರೆ.