Select Your Language

Notifications

webdunia
webdunia
webdunia
webdunia

ಮತ್ತೆ ರಚಿತಾ ರಾಮ್ ಹೇಳಿಕೆ ಸುತ್ತ ಹುಟ್ಟಿಕೊಂಡ ವಿವಾದ!

ಮತ್ತೆ ರಚಿತಾ ರಾಮ್ ಹೇಳಿಕೆ ಸುತ್ತ ಹುಟ್ಟಿಕೊಂಡ ವಿವಾದ!
ಬೆಂಗಳೂರು , ಮಂಗಳವಾರ, 22 ಅಕ್ಟೋಬರ್ 2019 (09:08 IST)
ಬೆಂಗಳೂರು: ಐ ಲವ್ ಯೂ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜತೆ ಬೋಲ್ಡ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತೇನೆ ಎಂದು ಹೇಳಿಕೆ ನೀಡಿದ್ದ ರಚಿತಾ ರಾಮ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.


ರಚಿತಾರ ಹೇಳಿಕೆ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಬೇಸರಕ್ಕೂ ಕಾರಣವಾಗಿತ್ತು. ಆ ವಿವಾದ ತಣ್ಣಗಾದ ಬೆನ್ನಲ್ಲೇ ರಚಿತಾ ಇನ್ನೊಂದು ವಿವಾದ ಮೈಮೇಲೆಳೆದುಕೊಂಡಿದ್ದಾರೆ.

ಶಿವರಾಜ್ ಕುಮಾರ್ ಜತೆ ಆಯುಷ್ಮಾನ್ ಭವ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿರುವ ರಚಿತಾ ಆ ಚಿತ್ರದ ಅಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಯೊಂದು ನಿರ್ದೇಶಕ ಪಿ ವಾಸು ಬೇಸರಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಚಿತಾ ಈ ಚಿತ್ರದಲ್ಲಿ ಒಳ್ಳೆದು, ಕೆಟ್ಟದ್ದು ಏನೇ ಇದ್ದರೂ ನಿರ್ದೇಶಕರಿಗೆ ಸಲ್ಲಬೇಕು ಎಂದಿದ್ದರು. ಕೆಟ್ಟದ್ದು ಎಂದರೆ ರಚಿತಾ ಯಾವ ಅರ್ಥದಲ್ಲಿ ಹೇಳಿದರು ಎಂಬುದು ನಿರ್ದೇಶಕರ ಬೇಸರಕ್ಕೆ ಕಾರಣವಾಗಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಶ್ಚಿತಾರ್ಥ ಮಾಡಿಕೊಂಡ ಚಂದನ್ ಶೆಟ್ಟಿ-ನಿವೇದಿತಾ ಗೌಡ