Publish Date: Mon, 21 Oct 2019 (09:39 IST)
Updated Date: Mon, 21 Oct 2019 (09:41 IST)
ಬೆಂಗಳೂರು: ಕಿಚ್ಚ ಸುದೀಪ್ ಈಗೇನೋ ಅಭಿನಯ ಚಕ್ರವರ್ತಿಯಾಗಿ ಬಹುಭಾಷೆಗಳಲ್ಲಿ ಮಿಂಚುತ್ತಿರಬಹುದು. ಆದರೆ ಮುಂದೊಂದು ದಿನ ಸಿನಿಮಾದಿಂದ ನಿವೃತ್ತಿಯಾಗಿ ಅವರಿಗೆ ಬೇರೊಂದು ಕೆಲಸ ಮಾಡುವ ಯೋಜನೆಯಿದೆಯಂತೆ.
ಅದನ್ನು ಅವರು ಬಿಗ್ ಬಾಸ್ ಶೋನಲ್ಲಿ ಬಹಿರಂಗಪಡಿಸಿದ್ದಾರೆ. ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿ ಚಂದನ್ ಆಚಾರ ಹಿಂದೆ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವಿಚಾರವನ್ನು ಹೇಳುವಾಗ ಕಿಚ್ಚ ಸುದೀಪ್ ತಮ್ಮ ಮುಂದಿನ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.
ಕುಕಿಂಗ್ ಕೆಲಸವನ್ನು ಕಳಪೆ ಅಂದುಕೊಳ್ಳಬೇಡಿ. ಸಿನಿಮಾ ಬಿಟ್ಟ ನಂತರ ಮುಂದೊಂದು ದಿನ ನನ್ನದೇ ರೆಸ್ಟೋರೆಂಟ್ ಸ್ಟಾರ್ಟ್ ಮಾಡಿ, ನಾನೇ ಕುಕ್ ಮಾಡಿ ಎಲ್ಲರಿಗೂ ಬಡಿಸಬೇಕು ಎಂಬುದು ನನ್ನ ಕನಸು ಎಂದು ಸುದೀಪ್ ಹೇಳಿಕೊಂಡಿದ್ದಾರೆ.