Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಸಾಕಾಗಿದೆ! ಎಂದು ಕೋಟ್ ಬಿಚ್ಚಿ ಹೊರನಡೆದ ಸಲ್ಮಾನ್ ಖಾನ್!

ಬಿಗ್ ಬಾಸ್ ಹಿಂದಿ
ಮುಂಬೈ , ಮಂಗಳವಾರ, 22 ಅಕ್ಟೋಬರ್ 2019 (10:43 IST)
ಮುಂಬೈ: ಬಿಗ್ ಬಾಸ್ ಹಿಂದಿ ಅವತರಣಿಕೆಯ 13 ನೇ ಸೀಸನ್ ನಲ್ಲಿ ವೀಕ್ಷಕರು, ಸ್ಪರ್ಧಿಗಳಿಗೆ ಶಾಕಿಂಗ್ ನ್ಯೂಸ್ ಕೊಡುತ್ತಿದ್ದಾರೆ ನಿರೂಪಕ, ಸೂಪರ್ ಸ್ಟಾರ್ ಸಲ್ಮಾನ್ ಖಾನ್.


ಬಿಗ್ ಬಾಸ್ ಆರಂಭವಾದಾಗಿನಿಂದಲೂ ಸಲ್ಮಾನ್ ಇದರ ನಿರೂಪಣೆ ಮಾಡುತ್ತಿದ್ದಾರೆ. ಆದರೆ ವಾಹಿನಿ ಬಿಟ್ಟಿರುವ ಹೊಸ ಕ್ಲಿಪ್ಪಿಂಗ್ ನಲ್ಲಿ ಸಲ್ಮಾನ್ ಕೋಪದಿಂದ ಕೋಟು ಬಿಚ್ಚಿ ಬೇರೆ ಯಾರಾದರೂ ಈ ಶೋ ನಿರೂಪಿಸಲಿ ಎಂದು ವೇದಿಕೆ ಬಿಟ್ಟು ಹೊರನಡೆಯುವ ದೃಶ್ಯವಿದೆ.

ಇದು ಸ್ಪರ್ಧಿಗಳಿಗೂ ಶಾಕ್ ಆಗುತ್ತದೆ. ನೀವು ಇದನ್ನು ಜೋಕ್ ಎಂದು ಭಾವಿಸಿರಬಹುದು. ಆದರೆ ಇದು ಗಂಭೀರವಾದ ವಿಚಾರ ಎನ್ನುವ ಸಲ್ಮಾನ್ ಕೋಪದಿಂದಲೇ ಧರಿಸಿದ್ದ ಕೋಟು ಕಿತ್ತು ಹಾಕಿ ಬೇರೆ ಯಾರಾದರೂ ಈ ಶೋ ನಡೆಸಲಿ ಎನ್ನುತ್ತಾ ಹೊರನಡೆಯುತ್ತಾರೆ. ಈಗಗಾಲೇ ಟಿಆರ್ ಪಿಯಲ್ಲಿ ಕಳೆಗುಂದಿರುವ ಬಿಗ್ ಬಾಸ್ ಹಿಂದಿ ಶೋ ಸಲ್ಮಾನ್ ಕೂಡಾ ಇಲ್ಲದೇ ಹೋದರೆ ಮತ್ತಷ್ಟು ತಳ ಸೇರುವುದು ಖಂಡಿತಾ. ಇದು ಸಲ್ಮಾನ್ ಮಾಡಿದ ತಮಾಷೆಯಾ ಅಥವಾ ನಿಜವಾಗಿಯೂ ಕೋಪದಿಂದಲೇ ಹೊರನಡೆದರಾ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ದಿನ ಬಿಡುಗಡೆಯಾಗುತ್ತಿದೆ ಅವನೇ ಶ್ರೀಮನ್ನಾರಾಯಣ ಸಿನಿಮಾ!