Select Your Language

Notifications

webdunia
webdunia
webdunia
webdunia

ಯಶ್ ಕೆಜಿಎಫ್ 2, ಪ್ರಭಾಸ್ ಸಲಾರ್ ನಡುವೆ ಫೈಟ್

ಯಶ್ ಕೆಜಿಎಫ್ 2, ಪ್ರಭಾಸ್ ಸಲಾರ್ ನಡುವೆ ಫೈಟ್
ಬೆಂಗಳೂರು , ಸೋಮವಾರ, 23 ಆಗಸ್ಟ್ 2021 (08:55 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಎರಡು ಅದ್ಧೂರಿ ಸಿನಿಮಾಗಳೆಂದರೆ ಕೆಜಿಎಫ್ 2 ಮತ್ತು ಸಲಾರ್.


ನಿನ್ನೆ ಕೆಜಿಎಫ್ 2 ಸಿನಿಮಾ ರಿಲೀಸ್ ದಿನಾಂಕವನ್ನು ಹೊಂಬಾಳೆ ಫಿಲಂಸ್ ಪ್ರಕಟಿಸಿದೆ. ಅದರಂತೆ ಮುಂದಿನ ವರ್ಷ ಏಪ್ರಿಲ್ 14 ಕ್ಕೆ ಕೆಜಿಎಫ್ 2 ರಿಲೀಸ್ ಆಗುವುದು ಪಕ್ಕಾ ಆಗಿದೆ.

ಆದರೆ ಇದೀಗ ಇದೇ ನಿರ್ಮಾಣ ಸಂಸ್ಥೆಯ ಸಲಾರ್ ಸಿನಿಮಾ ಜೊತೆಗೆ ಡೇಟ್ ಕ್ಲ್ಯಾಶ್ ಆಗುವ ಸಾಧ್ಯತೆಯಿದೆ. ಸಲಾರ್ ಕೂಡಾ ಇದೇ ದಿನ ರಿಲೀಸ್ ಆಗುತ್ತಿರುವುದಾಗಿ ಈ ಮೊದಲೇ ಚಿತ್ರತಂಡ ಅನೌನ್ಸ್ ಮಾಡಿದೆ. ಈ ಸಿನಿಮಾವನ್ನೂ ಪ್ರಶಾಂತ್ ನೀಲ್ ಅವರೇ ನಿರ್ದೇಶಿಸಿದ್ದು, ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಒಂದೇ ದಿನ ಎರಡು ಬಿಗ್ ಸಿನಿಮಾಗಳನ್ನು ರಿಲೀಸ್ ಮಾಡುವುದಾಗಿ ಘೋಷಿಸಿ ಹೊಂಬಾಳೆ ಫಿಲಂಸ್ ಅಚ್ಚರಿ ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚಿನ ಹೀರೋಯಿನ್ ಯಾರು ಗೊತ್ತಾ?