Select Your Language

Notifications

webdunia
webdunia
webdunia
webdunia

ದೀಪಾವಳಿಗೆ 'ವಿಂಡೋಸೀಟ್' ಟೀಸರ್ ನಿಮ್ಮ ಮುಂದೆ..

ವಿಂಡೋಸೀಟ್ ಟೀಸರ್ ಗೆ ಡೇಟ್ ಫಿಕ್ಸ್ : ದೀಪಾವಳಿಗೆ ತಂಡದಿಂದ ಸ್ಪೆಷಲ್ ಗಿಫ್ಟ್.

ದೀಪಾವಳಿಗೆ 'ವಿಂಡೋಸೀಟ್' ಟೀಸರ್ ನಿಮ್ಮ ಮುಂದೆ..
ಬೆಂಗಳೂರು , ಸೋಮವಾರ, 2 ನವೆಂಬರ್ 2020 (13:41 IST)
ಸಿನಿಮಾ ಅಂದ್ರೆ ಎಲ್ಲರಿಗೂ ಒಂದು ಕುತೂಹಲ ಇದ್ದೆ ಇರುತ್ತೆ. ಸಿನಿಮಾದ ಫೈನಲ್ ಔಟ್ ಪುಟ್ ಅನ್ನು ಮಾತ್ರ ನಾವೂ ನೋಡೋಕೆ ಸಾಧ್ಯ‌ ಇರೋದು. ಸಾಮಾನ್ಯರಿಗೆ ಚಿತ್ರೀಕರಣ ಹೇಗೆ ನಡೆಯುತ್ತೆ, ಅದರ ಹಿಂದಿರುವ ಕಷ್ಟ ಏನು, ಸೆಟ್ ನಲ್ಲಿ ಹೇಗೆಲ್ಲಾ ಮಸ್ತಿ ಮಾಡ್ತಾರೆ ಇದ್ಯಾವುದೇ ಗಮನಕ್ಕೆ ಬರೋಲ್ಲ. ಹೀಗಾಗಿಯೇ ಇತ್ತೀಚೆಗೆ ಮೇಕಿಂಗ್ ವಿಡಿಯೋ ಟ್ರೆಂಡ್ ಶುರುವಾಗಿದೆ.
ವಿಂಡೋಸೀಟ್ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಕೇಳಿರ್ತೀರಾ. ಇದೀಗ ಮತ್ತೆ ವಿಂಡೋಸೀಟ್ ಸದ್ದು ಮಾಡ್ತಾ ಇರೋದು ತನ್ನ ಮೇಕಿಂಗ್ ವಿಡಿಯೋದಿಂದಾಗಿ. ಹೌದು, ಸಿನಿಪ್ರೇಕ್ಷಕರ ಖುಷಿಗಾಗಿ ಸಿನಿಮಾ ತಂಡ ಮೇಕಿಂಗ್ ವಿಡಿಯೋವನ್ನು ಕಿಚ್ಚ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದಾರೆ. ಅಷ್ಟೇ ಅಲ್ಲ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿಕೊಂಡಿದೆ.
webdunia
ಸದ್ಯ ರಿಲೀಸ್ ಆಗಿರುವ ಮೇಕಿಂಗ್ ವಿಡಿಯೋದಲ್ಲಿ ಸಿನಿಮಾ ಸೆಟ್, ನಿರ್ದೇಶಕರ ಪಾಡು, ನಾಯಕನ ತಯಾರಿ, ಮೇಕಪ್, ಟೆಕ್ನಿಕಲ್ ಟೀಂ ಹೀಗೆ ಸಿನಿಮಾದ ಎಲ್ಲಾ ವಿಭಾಗವನ್ನಿ ಅದ್ಭುತವಾಗಿ ತೋರಿಸಿದ್ದಾರೆ. ಮೇಕಿಂಗ್ ವಿಡಿಯೋ ಬಾರೀ ಸದ್ದು ಮಾಡ್ತಾ ಇದೆ.
webdunia
ದಿನೇ ದಿನೇ ಅಭಿಮಾನಿಗಳಿಗೆ ಒಂದೊಂದೆ ಅಪ್ಡೇಟ್ ಕೊಡ್ತಿರೋ ನಿರ್ದೇಶಕಿ ಶೀತಲ್ ಶೆಟ್ಟಿ, ದೀಪಾವಳಿಗೆ ಮತ್ತೊಂದು ಸ್ಪೆಷಲ್ ಗಿಫ್ಟ್ ಕೊಡಲಯ ತಯಾರಾಗಿದ್ದಾರೆ. ಹೌದು ಈಗಾಗಲೇ ಫಸ್ಟ್ ಲುಕ್ ನಿಂದ ಕುತೂಹಲ ಮೂಡಿಸಿದ್ದ ವಿಂಡೋಸೀಟ್ ಸಿನಿಮಾದ ಟೀಸರ್ ಗೆ ಸಿದ್ಧತೆ ನಡೆಸಲಾಗುತ್ತಿದೆ. ದೀಪಾವಳಿ ಹಬ್ಬದಂದು ಸಿನಿಮಾದ ಟೀಸರ್ ರಿಲೀಸ್ ಆಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
 
ರೊಮ್ಯಾಂಟಿಕ್, ಥ್ರಿಲ್ಲರ್ ಕಥೆ ಹೊಂದಿರುವ ವಿಂಡೋಸೀಟ್ ನಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಬಂಡಾರಿ ನಾಯಕರಾಗಿದ್ದಾರೆ. ಸಿನಿಮಾದ ಫಸ್ಟ್ ಲುಕ್, ಕಥೆ ಈ ಎಲ್ಲವನ್ನು ನೋಡುತ್ತಿದ್ರೆ ನಾಯಕ ನಿರೂಪ್ ಬಂಡಾರಿಗೆ ಒಳ್ಳೆ ಬ್ರೇಕ್ ಸಿಗುವ ಲಕ್ಷಣಗಳು ಕಾಣುತ್ತಿವೆ. ನಿರೂಪ್ ಗೆ ನಾಯಕಿಯರಾಗಿ ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರವಿಶಂಕರ್, ಮಧುಸೂದನ್ ರಾವ್, ಲೇಖಾ ನಾಯ್ಡು, ಸೂರಜ್ ಚಿತ್ರದ
ತಾರಾಬಳಗದಲ್ಲಿದ್ದಾರೆ.
webdunia
ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋಸೀಟ್ ಗೆ ನಿರ್ಮಾಪಕ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ವಿಘ್ನೇಶ್ ರಾಜ್ ಕ್ಯಾಮೆರಾದಲ್ಲಿ ಸುಂದರ ಸಿನಿಮಾ ಸೆರೆಯಾಗಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ನವಾಜುದ್ದೀನ್ ಸಿದ್ಧಿಕಿ ಹೇಳಿದ ಈ ಮಾತಿಗೆ ಬೆಚ್ಚಿಬಿದ್ದ ಕಾಲಿವುಡ್