Select Your Language

Notifications

webdunia
webdunia
webdunia
webdunia

ದೀಪಾವಳಿ ಟೈಮ್ ನಲ್ಲಿ ಐಪಿಎಲ್ ಯಾಕಿಲ್ಲ? ಬಿಸಿಸಿಐ ಸ್ಪಷ್ಟನೆ ಏನು ಗೊತ್ತಾ?

ದೀಪಾವಳಿ
ಮುಂಬೈ: ಐಪಿಎಲ್ 13 ಆಯೋಜನೆಗೆ ದಿನಾಂಕ ನಿಗದಿಯಾಗುತ್ತಿದ್ದಂತೇ ನೇರಪ್ರಸಾರ ಮಾಡುವ ಸಂಸ್ಥೆ, ಫ್ರಾಂಚೈಸಿಗಳಲ್ಲಿ ಅಪಸ್ವರವೂ ಕೇಳಿಬಂದಿದೆ. ಇದಕ್ಕೆ ಕಾರಣ ದೀಪಾವಳಿ ದಿನಗಳವರೆಗೆ ಐಪಿಎಲ್ ಇಲ್ಲದೇ ಇರುವುದು.


ನವಂಬರ್ 8ಕ್ಕೇ ಐಪಿಎಲ್ ಮುಕ್ತಾಯವಾಗುತ್ತಿದೆ. ನವಂಬರ್ ಎರಡನೇ ವಾರದಲ್ಲಿ ದೀಪಾವಳಿಯಿದೆ. ಒಂದು ವೇಳೆ ದೀಪಾವಳಿ ಟೈಮ್ ನಲ್ಲಿ ಐಪಿಎಲ್ ಇದ್ದಿದ್ದರೆ ಹೆಚ್ಚು ಜಾಹೀರಾತುದಾರರನ್ನು ಸೆಳೆಯಬಹುದಿತ್ತು ಎಂಬುದು ನೇರಪ್ರಸಾರ ಮಾಡುವ ಸ್ಟಾರ್ ಸಂಸ್ಥೆಯ ಅಸಮಾಧಾನಕ್ಕೆ ಕಾರಣ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಅಧಿಕಾರಿಗಳು ‘ಈ ಸಮಯದಲ್ಲಿ ಭಾರತದಲ್ಲಿ ಅಷ್ಟೊಂದು ವೀಕ್ಷಕರು ಸಿಗುವುದಿಲ್ಲ ಎಂದು ವೀಕ್ಷಕ ವಿಶ್ಲೇಷಣಾ ಸಮಿತಿ ಬಾರ್ಕ್ ಸಮೀಕ್ಷಾ ವರದಿಯೇ ಇದೆ. ಹೀಗಾಗಿ ಆ ಸಮಯದಲ್ಲಿ ಐಪಿಎಲ್ ನಡೆಸುತ್ತಿಲ್ಲ. ಈ ಬಗ್ಗೆ ನಾವು ಸ್ಟಾರ್ ಸಂಸ್ಥೆ ಜತೆ ಮಾತುಕತೆ ನಡೆಸುತ್ತೇವೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಕ್ರಿಕೆಟ್ ಮುಂದೂಡಿಕೆ: ಐಪಿಎಲ್ ಅಭಿಮಾನಿಗಳಿಗೆ ಖುಷಿಯೋ ಖುಷಿ