Select Your Language

Notifications

webdunia
webdunia
webdunia
webdunia

ನಟ ನವಾಜುದ್ದೀನ್ ಸಿದ್ಧಿಕಿ ಹೇಳಿದ ಈ ಮಾತಿಗೆ ಬೆಚ್ಚಿಬಿದ್ದ ಕಾಲಿವುಡ್

ನಟ ನವಾಜುದ್ದೀನ್ ಸಿದ್ಧಿಕಿ ಹೇಳಿದ ಈ ಮಾತಿಗೆ ಬೆಚ್ಚಿಬಿದ್ದ ಕಾಲಿವುಡ್
ಚೆನ್ನೈ , ಸೋಮವಾರ, 2 ನವೆಂಬರ್ 2020 (11:42 IST)
ಚೆನ್ನೈ : ರಜನೀಕಾಂತ್ ಅಭಿನಯದ ‘ಬೆಟ್ಟಾ’ ಚಿತ್ರದ ಮೂಲಕ  ತಮಿಳುಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದೀಕಿ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ  ಕಮಲ್ ಹಾಸನ್ ಅವರೊಂದಿನ ಕೆಲಸದ ಬಗ್ಗೆ ಮಾತನಾಡುವುದರ ಮೂಲಕ ಕಾಲಿವುಡ್ ಚಿತ್ರರಂಗವನ್ನು ಬೆಚ್ಚಿಬೀಳಿಸಿದ್ದಾರೆ.

ಕಮಾಲ್ ಹಾಸನ್ ಅಭಿನಯದ ‘ಹೇ ರಾಮ್’ ಚಿತ್ರದಲ್ಲಿ ನಟ ನವಾಜುದ್ದೀನ್ ಸಿದ್ಧಿಕಿ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಆದರೆ ಚಿತ್ರಕ್ಕೆ ಅಂತಿಮ ರೂಪ ಕೊಡುವ ವೇಳೆ ಅವರ ದೃಶ್ಯ ಉದ್ದವಾದ ಕಾರಣ ಅದನ್ನು ಚಿತ್ರದಿಂದ ತೆಗೆದುಹಾಕಲಾಗಿದೆ. 

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ನವಾಜುದ್ದೀನ್ ಸಿದ್ದಿಕಿ, ಇದರಿಂದ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ. ಆದರೆ ಈ ಬಗ್ಗೆ ಕೋಪವಿಲ್ಲ. ಕಮಲ್ ಹಾಸನ್ ಜೊತೆ ನಟಿಸುವ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಫೋಟೊ ಪೋಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದ ನಟಿ ಕಸ್ತೂರಿ