Publish Date: Mon, 02 Nov 2020 (11:33 IST)
Updated Date: Mon, 02 Nov 2020 (11:37 IST)
ಚೆನ್ನೈ : ನಟಿ ಕಸ್ತೂರಿ 90 ದಶಕದ ನಟಿಯರಲ್ಲಿ ಒಬ್ಬರು. ಇವರು ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳಂ, ಕನ್ನಡದಲ್ಲಿ ನಟಿಸಿದ್ದಾರೆ. ಆದರೆ ಇದೀಗ ಇವರು ಸೋಶಿಯಲ್ ಮೀಡಿಯಾದಲ್ಲಿಮಾಡಿದ ಪೋಸ್ಟ್ ವೊಂದು ಕೋಲಾಹಲ ಸೃಷ್ಟಿಸಿದೆ.
ಕಸ್ತೂರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇವರು ಇತ್ತೀಚೆಗೆ ಇನ್ ಸ್ಟಾಗ್ರಾಂ ನಲ್ಲಿ ತಮ್ಮ ದೇವತೆ ಪಾತ್ರದ ಫೋಟೊವೊಂದನ್ನು ಪೋಸ್ಟ್ ಮಾಡಿದ್ದಾರೆ. ನಟಿ ನಯನತಾರಾ ಅಭಿನಯದ ಮೂಕುತಿ ಅಮ್ಮನ್ ಚಿತ್ರದ ಟ್ರೈಲರ್ ಬಿಡುಗಡೆಯಾದ ಮರುದಿನ ನಟಿ ಕಸ್ತೂರಿ ಈ ಫೋಟೊ ಪೋಸ್ಟ್ ಮಾಡಿ ಸಮಸ್ಯೆ ಉಂಟುಮಾಡಿದ್ದಾರೆ.
ನಯನತಾರಾ ಅವರ ಮೂಕುತಿ ಅಮ್ಮನ್ ಚಿತ್ರದೊಂದಿಗೆ ಸ್ಪರ್ಧೆಗಿಳಿಯಲು ಕಸ್ತೂರಿ ಅಮ್ಮನ್ ಅವರು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಜೀವನದ ಕೊನೆಯ ದಿನಗಳಲ್ಲಿ ಇದೆಲ್ಲಾ ನಿಮಗೆ ಬೇಕೆ ಎಂದು ಟೀಕೆ ಮಾಡಿದ್ದಾರೆ ಎನ್ನಲಾಗಿದೆ.