Select Your Language

Notifications

webdunia
webdunia
webdunia
Wednesday, 9 April 2025
webdunia

ನಟ ಅಕ್ಷಯ್ ಕುಮಾರ್ ಸಿನಿಮಾ ರಿಲೀಸ್ ಆಗೋದೇ ಇಲ್ಲ : ಅಂಥದ್ದೇನಾಯ್ತು?

ಬಾಲಿವುಡ್
ಮುಂಬೈ , ಶುಕ್ರವಾರ, 2 ಅಕ್ಟೋಬರ್ 2020 (12:38 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಸಿನಿಮಾ ದೀಪಾವಳಿಗೆ ಬಿಡುಗಡೆ ಆಗುವುದಿಲ್ಲ.

ಚಿತ್ರಮಂದಿರಗಳು ತೆರೆದಿದ್ದರೂ, ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಸಿನಿಮಾ ದೀಪಾವಳಿಯಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ನಿರ್ಮಾಪಕ ಶಿಬಶಿಶ್ ಸರ್ಕಾರ್ ಖಚಿತಪಡಿಸಿದ್ದಾರೆ.

ಸೂರ್ಯವಂಶಿಯನ್ನು ದೀಪಾವಳಿಯಂದು ಬಿಡುಗಡೆ ಮಾಡುವುದು ಸರಿಯಲ್ಲ. ಏಕೆಂದರೆ ಪ್ರಮುಖ ರಾಜ್ಯಗಳಲ್ಲಿನ ಚಿತ್ರಮಂದಿರಗಳು ಇನ್ನೂ ತೆರೆಯುತ್ತಿದೆಯೇ ಎಂದು ನಮಗೆ ತಿಳಿದಿಲ್ಲ ಎಂದು ಶಿಬಶಿಶ್ ಸರ್ಕಾರ್ ಹೇಳಿದ್ದಾರೆ.

ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ತಮ್ಮ ಆಸನ ಸಾಮರ್ಥ್ಯದ 50 ಪ್ರತಿಶತದವರೆಗೆ ತೆರೆಯಲು ಅನುಮತಿ ನೀಡಲಾಗುವುದು ಎಂದು ಗೃಹ ಸಚಿವಾಲಯ ಹೇಳಿದೆ.
ಈಗ ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಅವಕಾಶವಿರುವುದರಿಂದ, ಸೂರ್ಯವಂಶಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಇದು ನಿಜವಲ್ಲ ಎಂದಿದೆ ಚಿತ್ರತಂಡ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿಗೆ ಆ ಥರ ಮಾಡೇ ಇಲ್ಲ ಎಂದ ನಿರ್ಮಾಪಕ