Select Your Language

Notifications

webdunia
webdunia
webdunia
webdunia

ಪೊಲೀಸರಿಗೆ ಸುಳ್ಳು ಹೇಳಿದ ನಿರ್ಮಾಪಕ? ಬಾಲಿವುಡ್ ನಟಿ ಹೇಳೋದೇನು?

ಪೊಲೀಸರಿಗೆ ಸುಳ್ಳು ಹೇಳಿದ ನಿರ್ಮಾಪಕ? ಬಾಲಿವುಡ್ ನಟಿ ಹೇಳೋದೇನು?
ಮುಂಬೈ , ಶುಕ್ರವಾರ, 2 ಅಕ್ಟೋಬರ್ 2020 (12:20 IST)
ಪೊಲೀಸರಿಗೆ ನಿರ್ಮಾಪಕ ಸುಳ್ಳು ಹೇಳಿದ್ದು, ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಬೇಕು.

ಹೀಗಂತ ಬಾಲಿವುಡ್ ನಟಿ ಪಾಯಲ್ ಘೋಷ್ ಆಗ್ರಹ ಮಾಡಿದ್ದಾರೆ. ನಿರ್ಮಾಪಕ ಅನುರಾಗ ಕಶ್ಯಪ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಸುಳ್ಳು ಹೇಳಿದ್ದಾರೆ. ಅವರಿಗೆ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವಂತೆ ನಟಿ ಕೋರಿದ್ದಾರೆ.

ಮುಂಬೈ ಪೊಲೀಸರಿಗೆ ಅನುರಾಗ್ ಕಶ್ಯಪ್ ನೀಡಿರುವ ಹೇಳಿಕೆಗೆ ನಟಿ ಪಾಯಲ್ ಘೋಷ್ ಪ್ರತಿಕ್ರಿಯಿಸಿದ್ದಾರೆ. ನಿರ್ಮಾಪಕರನ್ನು ವರ್ಸೋವಾ ಪೋಲಿಸ್ ಠಾಣೆಯಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಪ್ರಶ್ನಿಸಲಾಯಿತು.

ಚಲನಚಿತ್ರ ನಿರ್ಮಾಪಕರ ಪರ ವಕೀಲರು ನಟಿ ಆರೋಪಿಸಿರುವ ಘಟನೆ ನಡೆದಾಗ ನಿರ್ಮಾಪಕ ದೇಶದಿಂದ ಹೊರಗಿದ್ದರು ಎಂದು ದಾಖಲೆಗಳನ್ನು ಒದಗಿಸಿದ್ದಾರೆ. ಇದು ಶುದ್ಧ ಸುಳ್ಳು ಎಂದು ಪಾಯಲ್ ಘೋಷ್ ಕರೆದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆದಿಪುರುಷದಲ್ಲಿ ಸೀತೆ ಪಾತ್ರ ಅನುಷ್ಕಾ ಮಾಡುತ್ತಾರಾ? ಈ ಬಗ್ಗೆ ಅನುಷ್ಕಾ ಪ್ರತಿಕ್ರಿಯೆ ಏನು?