Webdunia - Bharat's app for daily news and videos

Install App

ತೆಲುಗಿನಲ್ಲಿ ಡಬ್ ಮಾಡ್ತಾರಾ ಪುನೀತ್ ರಾಜಕುಮಾರ್?

Webdunia
ಗುರುವಾರ, 11 ಮಾರ್ಚ್ 2021 (10:37 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ತೆಲುಗಿಗೆ ಡಬ್ ಆಗುತ್ತಿದೆ. ಆದರೆ ತೆಲುಗಿನಲ್ಲಿ ಪುನೀತ್ ಪಾತ್ರಕ್ಕೆ ಅವರೇ ಡಬ್ಬಿಂಗ್ ಮಾಡ್ತಾರಾ?


ಈ ಬಗ್ಗೆ ನಿನ್ನೆ ಯುವರತ್ನ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಪುನೀತ್ ಸ್ಪಷ್ಟನೆ ಕೊಟ್ಟಿದ್ದಾರೆ. ‘ನನಗೆ ತೆಲುಗು ಅಲ್ಪಸ್ವಲ್ಪ ಬರುತ್ತೆ. ಆದರೆ ನಿರರ್ಗಳವಾಗಿ ಮಾತನಾಡಲು ಬರಲ್ಲ. ಹೀಗಾಗಿ ನಾನು ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡಿದರೆ ಸರಿಯಾಗಲ್ಲ. ಬೇರೆಯರು, ಸ್ಪಷ್ಟವಾಗಿ ಮಾತನಾಡುವವರೇ ಡಬ್ಬಿಂಗ್ ಮಾಡ್ತಾರೆ’ ಎಂದು ಪುನೀತ್ ಹೇಳಿದ್ದಾರೆ.

ಏಪ್ರಿಲ್ 1 ರಂದು ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ಯುವ ಸಂಭ್ರಮ ಮಾರ್ಚ್‍ 20 ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿದೆ. ಈ ದಿನವೇ ಚಿತ್ರದ ಟ್ರೈಲರ್ ಕೂಡಾ ರಿಲೀಸ್ ಆಗಲಿದೆ.

ಸಿನಿಮಾದಲ್ಲಿ ಪುನೀತ್ ಜೊತೆಗೆ ಸಯ್ಯೇಷಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಡಾಲಿ ಧನಂಜಯ್, ಸೋನು ಗೌಡ, ದಿಗಂತ್, ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎಕ್ಕ ಮೂವಿ ಹೇಗಿದೆ: ಫಸ್ಟ್ ಹಾಫ್ ನೋಡಿದ ಪ್ರೇಕ್ಷಕರು ಏನಂತಿದ್ದಾರೆ

ಆಂಕರ್ ಅನುಶ್ರೀ ಮದುವೆಯಾಗುತ್ತಿರುವ ಹುಡುಗನ ಫೋಟೋ ವೈರಲ್

ಸುಪ್ರೀಂಕೋರ್ಟ್ ಕೇಳಿದ ಅದೊಂದು ಪ್ರಶ್ನೆಗೆ ದರ್ಶನ್ ಆಂಡ್ ಗ್ಯಾಂಗ್ ಗೆ ನಡುಕ ಶುರು

ಸಾಹಸಸಿಂಹ ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ನೀಡಲು ಸಿಎಂಗೆ ಮನವಿ ಸಲ್ಲಿಸಿದ ಅನಿರುದ್ಧ ಜತ್ಕರ್

ಮಾದೇವ ಸಕ್ಸಸ್ ಖುಷಿಯಲ್ಲಿದ್ದ ವಿನೋದ್ ಪ್ರಭಾಕರ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments