Select Your Language

Notifications

webdunia
webdunia
webdunia
webdunia

ಪತ್ನಿ ನತಾಶಗೆ ವಿಚ್ಚೇಧನ ನೀಡುತ್ತಾರಾ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ

ಪತ್ನಿ ನತಾಶಗೆ ವಿಚ್ಚೇಧನ ನೀಡುತ್ತಾರಾ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ

sampriya

ಮುಂಬೈ , ಶನಿವಾರ, 25 ಮೇ 2024 (17:07 IST)
Photo By X
ಮುಂಬೈ: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತು ಅವರ ಪತ್ನಿ ನತಾಶ ಸ್ಟಾನ್ಕೊವಿಕ್‌ ಅವರಿಗೆ ವಿಚ್ಚೇದನ ಸುದ್ದಿ ಭಾರೀ ವೈರಲ್‌ ಆಗಿದೆ. ಅದಲ್ಲದೆ ವಿಚ್ಛೇದನ ನೀಡಿದಲ್ಲಿ ಪಾಂಡ್ಯ ತಾವು ಗಳಿಸಿದ ಆಸ್ತಿಯಲ್ಲಿ ಶೇ 70ರಷ್ಟು ಜೀವನಾಂಶವನ್ನು ಪತ್ನಿಗೆ ನೀಡಬೇಕಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಆಸ್ತಿ ವಿಚಾರವಾಗಿ ಪಾಂಡ್ಯ ಅವರು ಮಾತನಾಡಿರುವ ಹಳೆ ವಿಡಿಯೋವೊಂದು ನೆಟ್ಟಿಗರು ಹಂಚಿಕೊಂಡಿದ್ದಾರೆ.

‘ಬ್ರೆಕ್‌ಫಾಸ್ಟ್ ವಿತ್ ಚಾಂಪಿಯನ್’ ಶೋದಲ್ಲಿ ಭಾಗವಹಿಸಿದ್ದ ಪಾಂಡ್ಯ ಅವರು ತಮ್ಮ ಗಳಿಕೆಯ
ವಿಚಾರವಾಗಿ ಮಾತನಾಡಿರುವುದು ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ತನ್ನೆಲ್ಲ ಆಸ್ತಿಯನ್ನು ತಾಯಿಯ ಹೆಸರಿಗೆ ನೊಂದಾಯಿಸಿರುವುದಾಗಿಯೂ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಅದಲ್ಲದೆ ನನ್ನ ಕಾರಿನಿಂದ ಹಿಡಿದು ನನ್ನ ಮನೆಯವರೆಗೂ ನನ್ನ ಪ್ರತಿ ಆಸ್ತಿಯನ್ನು ನನ್ನ ತಾಯಿಯ ಹೆಸರಿಗೆ ನೋಂದಾಯಿಸಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದು ಸದ್ಯ ಬಾರೀ ವೈರಲ್‌ ಆಗಿದೆ.

ಈ ವಿಡಿಯೋ ಹಂಚಿಕೊಂಡಿಕೊಂಡಿರುವ ನೆಟ್ಟಿಗರು ನಾವೆಲ್ಲರು ಪಾಂಡ್ಯ ಬಗ್ಗೆ ಚಿಂತಿಸುತ್ತಿದ್ದೇವೆ. ಆದರೆ ಆತ ಮುಂಚಿತವಾಗಿ ಎಲ್ಲವನ್ನು ಯೋಜಿಸಿದ್ದಾರೆ’ ಎಂದು ಕಾಲೆಳೆದರು.

ಪಾಂಡ್ಯ ಅವರು 2020ರಲ್ಲಿ ನಟಿ  ನತಾಶ ಜತೆ ಸರಳ ವಿವಾಹವಾಗಿದ್ದು, ಮಗ ಹುಟ್ಟಿದ 2023ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ದಂಪತಿಗೆ ಅಗಸ್ತ್ಯ ಎಂಬ ಮಗನಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಬಾರಿ ನನ್ನ ಕಟೌಟ್‌ ನಿಲ್ಲಿಸಿದ್ದು ನೋಡಿ ಭಾವುಕರಾದ ತುಕಾಲಿ ಸಂತೋಷ್