Publish Date: Fri, 21 Aug 2020 (16:22 IST)
Updated Date: Fri, 21 Aug 2020 (16:24 IST)
ಲಾಕ್ ಡೌನ್ ಹಾಗೂ ಅನ್ ಲಾಕ್ ಸಮಯದಲ್ಲಿಯೂ ಹಲವಾರು ಜನರಿಗೆ ಬಾಲಿವುಡ್ ನಟ ಸೋನು ಸೂದ್ ಸಹಾಯ ಮಾಡುತ್ತಲೇ ಇದ್ದಾರೆ.
ಹಲವು ಕಠಿಣ ಸಂದರ್ಭಗಳಲ್ಲಿಯೂ ಸಹ ಬಾಲಿವುಡ್ ನಟ ಕೊರೊನಾದಿಂದ ತೊಂದರೆಗೆ ಒಳಗಾದವರ ಪರವಾಗಿ ನಿಂತಿದ್ದಾರೆ.
ಅನೇಕರಿಗೆ ಸಹಾಯ ಹಸ್ತ ಚಾಚಿದ್ದು, ಆರ್ಥಿಕ ನೆರವು, ಇನ್ನಿತರ ನೆರವು ನೀಡಿರುವ ಈ ನಟನಿಗೆ ಇದೀಗ ಮನವಿಗಳ ಮಹಾಪೂರವೇ ಹರಿದು ಬರುತ್ತಿದೆ.
ಪ್ರತಿದಿನವೂ ನಟ ಸೋನು ಸೂದ್ ಗೆ ಸಾವಿರಾರು ಜನರು ನೆರವು ಕೋರಿ ಮನವಿ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಸಹಾಯ ಮಾಡುವಂತೆ ನಟನಿಗೆ ಬೇಡಿಕೆ ಇಟ್ಟಿದ್ದಾರೆ.
ಒಬ್ಬ ವ್ಯಕ್ತಿಯಾಗಿ ಎಲ್ಲರನ್ನೂ ಸಂಪರ್ಕ ಮಾಡಲು ಸಾಧ್ಯವಿಲ್ಲದ ಮಾತು. ನನ್ನ ಕೈಯಿಂದ ಆದಷ್ಟು ಸಹಾಯ ಮಾಡುವೆ ಎಂದಿರುವ ನಟ ಸೋನು ಸೂದ್, ಮೆಸೇಜ್ ನೋಡದಿದ್ದರೆ ನನ್ನ ಕ್ಷಮಿಸಿ ಎಂದು ಕ್ಷಮೆ ಕೇಳಿದ್ದಾರೆ.