Select Your Language

Notifications

webdunia
webdunia
webdunia
webdunia

ತಮ್ಮ ಮುಂದಿನ ಚಿತ್ರ ಈ ಖ್ಯಾತ ನಿರ್ದೇಶಕರ ಜೊತೆ ಮಾಡಲಿದ್ದಾರಾ ಅಲ್ಲು ಅರ್ಜುನ್?

ತಮ್ಮ ಮುಂದಿನ ಚಿತ್ರ ಈ ಖ್ಯಾತ ನಿರ್ದೇಶಕರ ಜೊತೆ ಮಾಡಲಿದ್ದಾರಾ ಅಲ್ಲು ಅರ್ಜುನ್?
ಹೈದರಾಬಾದ್ , ಬುಧವಾರ, 17 ಫೆಬ್ರವರಿ 2021 (10:33 IST)
ಹೈದರಾಬಾದ್ : ಪ್ರಸ್ತು ಅಲ್ಲು ಅರ್ಜುನ್ ಅವರು ಸುಕುಮಾರ್ ನಿರ್ದೇಶನದ ‘ಪುಷ್ಪಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಮುಂದಿನ ಚಿತ್ರ ಯಾವುದೆಂಬುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅವರು ಮುಂದಿನ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನದಲ್ಲಿ ಮಾಡಲಿದ್ದಾರೆ ಎಂಬ ವದಂತಿ ಕೇಳಿಬಂದಿದೆ.

ಮಾಹಿತಿ ಪ್ರಕಾರ ಕೊರಟಾಲ ಶಿವ ಮತ್ತು ಅಲ್ಲು ಅರ್ಜುನ್ ಕಾಂಬೋ ಚತ್ರ ಜೂನ್ ಅಥವಾ ಜುಲೈನಲ್ಲಿ  ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಚಿತ್ರಕ್ಕಾಗಿ ಚರ್ಚೆ ನಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶಿವ ಅವರು ಲಾಕ್ ಡೌನ್ ಸಮಯದಲ್ಲಿ ಈ ಚಿತ್ರದ ಸ್ಕ್ರಿಪ್ಟ್ ನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ಹಾಗೇ ಈ ಚಿತ್ರದಲ್ಲಿ ಪ್ರಬಲ ರಾಜಕೀಯ ನಾಯಕನ ಪಾತ್ರಕ್ಕಾಗಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ವದಂತಿ ಇದೆ. ಒಟ್ಟಾರೆ ಈ ವದಂತಿ ನಿಜವಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಘಣ್ಣ ಭೇಟಿಗೆ ಆಸ್ಪತ್ರೆಗೆ ಬಂದ ಪುನೀತ್ ರಾಜಕುಮಾರ್ ದಂಪತಿ