Publish Date: Tue, 19 Dec 2017 (08:02 IST)
Updated Date: Tue, 19 Dec 2017 (08:07 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕನ್ನು ನೀಡಿದ್ದಾರೆ. ಅದೆನೆಂದರೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲೇ ಇಬ್ಬರನ್ನು ಕೊಲೆಗಾರ ಸ್ಥಾನಕ್ಕೆ ನೇಮಿಸಿ, ಅವರು ಬಿಗ್ ಬಾಸ್ ಸೂಚಿಸುವ ವ್ಯಕ್ತಿಗಳನ್ನು ಕೊಲೆ ಮಾಡಬೇಕು. ಕೊಲೆಯಾಗುವ ವ್ಯಕ್ತಿಗಳು ತಪ್ಪಿಸಿಕೊಳ್ಳಬಹುದು. ಒಂದು ವೇಳೆ ಕೊಲೆಯಾದರೆ ಅವರು ಬಿಗ್ ಬಾಸ್ ಕೊಡುವ ಬಿಳಿ ಬಟ್ಟೆ ತೊಟ್ಟು ಗಾರ್ಡನ್ ಏರಿಯಾದಲ್ಲೆ ಇರಬೇಕು.
ಹಾಗೆ ಬಿಗ್ ಬಾಸ್ ಮನೆಯವರಿಗೆ ತಿಳಿಯದಂತೆ ಈಗಾಗಲ್ಲೇ ಅನುಪಮಾ ಹಾಗು ರಿಯಾಜ್ ಅವರನ್ನು ಕೊಲೆಗಾರರನ್ನಾಗಿ ನೇಮಿಸಿ ಅವರಿಗೆ ಒಂದು ಮೊಬೈಲ್ ಹಾಗು ಒಂದು ಹರಿದ ನೋಟಿನ ಭಾಗವನ್ನು ನೀಡಿದ್ದಾರೆ. ಹಾಗೆ ಕೊಲೆಗಾರರಿಬ್ಬರು ತಮ್ಮ ಜೊತೆಗಾರರನ್ನು ಈ ನೋಟಿನ ಆಧಾರದ ಮೇಲೆ ಹುಡುಕಬೇಕು ಹಾಗೆ ಮೊಬೈಲ್ ನಲ್ಲಿ ಬಿಗ್ ಬಾಸ್ ಹೇಳಿದ ವ್ಯಕ್ತಿಯನ್ನು ಕೊಲೆಮಾಡಬೇಕು. ಬಿಗ್ ಬಾಸ್ ಈಗಾಗಲೇ ರಿಯಾಜ್ ಗೆ ಲಾಸ್ಯ ಅವರನ್ನು ಕೊಲೆಮಾಡಲು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ