Publish Date: Mon, 18 Dec 2017 (08:03 IST)
Updated Date: Mon, 18 Dec 2017 (08:13 IST)
ಬೆಂಗಳೂರು: ಬಿಗ್ ಬಾಸ್ ಎಪಿಸೋಡ್ ನ ಕಿಚ್ಚನ್ ಟೈಮ್ ನಲ್ಲಿ ಅತಿಥಿಯಾಗಿ ನಟಿ ಹರಿಪ್ರಿಯಾ ಅವರು ಆಗಮಿಸಿದ್ದರು. ಇವರು ಬಿಗ್ ಬಾಸ್ ನ ಎಲ್ಲಾ ಸೀಸನ್ ಗಳನ್ನು ನೋಡಿರುದಾಗಿ ಹೇಳಿದ್ದಾರೆ. ಅಲ್ಲದೆ ಈ ಸೀಸನಲ್ ನಲ್ಲಿ ಕಾಮನ್ ಮ್ಯಾನ್ ಇರುವುದು ಒಂದು ವಿಶೇಷವಾಗಿದೆ ಎಂದು ಕೂಡ ಹೇಳಿದ್ದಾರೆ.
ಇವರ ಪ್ರಕಾರ ಫಿನಾಲೆಗೆ ದಿವಾಕರ್, ನಿವೇದಿತಾ, ಅನುಪಮಾ, ಕಾರ್ತಿಕ್, ಹಾಗೂ ಚಂದನ್ ಅವರು ಬರಬಹುದು ಎಂದು ಹೇಳಿ, ಹಾಗೆ ಅವರ ಪ್ರಕಾರ ಚಂದನ್ ಅವರು ಬಿಗ್ ಬಾಸ್ ಗೆಲ್ಲಬಹುದು ಎಂದಿದ್ದಾರೆ. ನಿವೇದಿತಾ ಅವರ ಫೆವರೆಟ್ ಕಂಟೆಸ್ಟೆಂಟ್ ಎಂದು ತಿಳಿಸಿದ್ದಾರೆ.
ಹರಿಪ್ರಿಯಾ ಅವರು ಕನ್ನಡ, ತೆಲುಗು, ಸೇರಿ ವಿವಿಧ ಭಾಷೆಗಳಲ್ಲಿ 37 ಸಿನಿಮಾಗಳನ್ನು ಮಾಡಿರುವುದಾಗಿ ತಿಳಿಸಿದ್ದಾರೆ. ಹಾಗೇ ‘ಉಗ್ರಂ’ ಹಾಗು ‘ನೀರ್ ದೋಸೆ’ ಇವರಿಗೆ ಖುಷಿ ಕೊಟ್ಟ ಸಿನಿಮಾ ಎಂದು ಕೂಡ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ