Publish Date: Mon, 18 Dec 2017 (08:18 IST)
Updated Date: Mon, 18 Dec 2017 (08:23 IST)
ಬೆಂಗಳೂರು: ಜೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಯ ಮೇಲೆ ಮಂಡ್ಯ ಜಿಲ್ಲೆಯಿಂದ ಬಂದ ಸೃಜನ್ ದರ್ಶನ್ ಅವರ ಚಕ್ರವರ್ತಿ ಚಿತ್ರದ ಟೈಟಲ್ ಹಾಡನ್ನು ಹಾಡಿದ್ದನು. ಸೃಜನ್ ನಲ್ಲಿ ಏನೋ ಒಂದು ಪ್ರತಿಭೆಯನ್ನು ಗುರುತಿಸಿದ ಹಂಸಲೇಖ ಅವರು ಆತನನ್ನು ಆಯ್ಕೆ ಮಾಡಿದ್ದರು. ಹಾಗೆ ಉಳಿದ ತೀರ್ಪುಗಾರರು ಕೂಡ ಆ ಹುಡುಗನ್ನು ಆಯ್ಕೆ ಮಾಡಿದರು.
ಸೃಜನ್ ಯಾವುದೇ ಸಂಗೀತ ಶಾಲೆಗೆ ಹೋಗಿ ಕಲಿತವನಲ್ಲ.ತಾನಾಗಿಯೇ ಮೊಬೈಲ್ ನಲ್ಲಿ ಹಾಡು ಕೇಳಿ ಕಲಿತವನು. ಈತ ಇಲ್ಲಿಗೆ ಬರಬೇಕೆಂದು ತಾನು ಮುದ್ದಾಗಿ ಸಾಕಿದ ಕರುವನ್ನು ಮಾರಿ ಅದರಿಂದ ಬಂದ ಹಣದಿಂದ ಬಟ್ಟೆ, ಶೂ ಧರಿಸಿ ಬಂದಿದ್ದಾನೆ ಎಂಬುದು ಆತನ ತಂದೆಯಿಂದ ತಿಳಿಯಿತು.
ಈ ಮಾತನ್ನು ಕೇಳಿ ನೊಂದ ಹಂಸಲೇಖ ಅವರು ತಾನು ಹಣ ಕೊಡುತ್ತೇನೆ, ಆ ಕರುವನ್ನು ವಾಪಾಸು ತಂದು ಸೃಜನ್ ಗೆ ಕೊಡಿಸಿ ಎಂದಾಗ ಸೃಜನ್ ಕಣ್ಣಲ್ಲಿ ಸಂತಸದ ಕಣ್ಣೀರು ಹರಿಯಿತು.ಅಲ್ಲದೇ ಹಂಸಲೇಖ ಅವರು ಸೃಜನ್ ಗೆ ತಮ್ಮ ಸಂಗೀತ ಶಾಲೆಯಲ್ಲಿ ಉಚಿತವಾಗಿ ಸಂಗೀತ ಹೇಳಿಕೊಡುವುದಾಗಿ ಹೇಳಿದ್ದಾರೆ. ಹಾಗೇ ಊರಿಗೆ ಹೋಗಿ ಬರಲು ಬಸ್ಸ್ ಚಾರ್ಜ್ ಕೂಡ ತಾವೇ ಕೊಡುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ