Publish Date: Sun, 17 Dec 2017 (18:14 IST)
Updated Date: Sun, 17 Dec 2017 (18:22 IST)
ಬೆಂಗಳೂರು: ಬಹುಬಾಷಾ ನಟಿ, ಮಲಯಾಳಂ ಬೆಡಗಿ ಭಾವನಾ ಮೆನನ್ ಅವರ ಮದುವೆ ದಿನ ಫಿಕ್ಸ್ ಆಗಿದ್ದು, ಶೀಘ್ರವೇ ಹಸೆಮಣೆ ಏರಲಿದ್ದಾರಂತೆ. ಇವರು ಕನ್ನಡ ಚಿತ್ರ ನಿರ್ಮಾಪಕ ನವೀನ್ ಅವರನ್ನು ವಿವಾಹವಾಗಲ್ಲಿದ್ದಾರೆ.
ಕಳೆದ ಮಾರ್ಚ್ 9 ರಂದು ಕೊಚ್ಚಿಯಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ತಿಂಗಳು 22 ರಂದು ಕೇರಳದ ತ್ರಿಶೂರ್ ನಲ್ಲಿ ವಿವಾಹವಾಗಲಿದ್ದಾರೆ. ಸಂಬಂಧಿಕರು ಹಾಗೂ ಆಪ್ತರು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭಾವನಾ ಅವರ ತಾಯಿ ಹೇಳಿದ್ದಾರೆ.
ಭಾವನಾ ಅವರು ಪುನೀತ್ ಅಭಿನಯದ ‘ಜಾಕಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ‘ರೋಮಿಯೊ’, ‘ವಿಷ್ಣುವರ್ಧನ್; ‘ಬಚ್ಚನ್’, ‘ಟೋಪಿವಾಲ’,’ಮುಕುಂದ ಮುರಾರಿ’ ಇನ್ನೂ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆ ನವೀನ್ ಅವರು ಕೂಡ ಕನ್ನಡದ ‘ನಾಯಕ ‘ ಚಿತ್ರದಲ್ಲಿ ರಾಗಿಣಿ ಅವರ ಜೊತೆ ನಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ