ಪ್ರೀತಿಸಿದ ಯುವತಿ ಕೈಕೊಟ್ಟು ಬೇರೆ ಯುವತಿಯೊಂದಿಗೆ ಮದುವೆಯಾಗಲು ಮುಂದಾಗಿದ್ದ ಪ್ರಿಯತಮನನ್ನು ಎಳೆದುತಂದು ಗ್ರಾಮಸ್ಥರು ಪ್ರೀತಿಸಿದ ಯುವತಿಯೊಂದಿಗೆ ಮದುವೆ ಮಾಡಿಸಿದ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ದೊಡ್ಡೇಬಾಗಿಲು ಗ್ರಾಮದಲ್ಲಿ ನಡೆದಿದೆ.
ದೊಡ್ಡೇ ಬಾಗಿಲು ಗ್ರಾಮದವರಾದ ರೇಣುಕುಮಾರ್ ಮತ್ತು ರೋಜಾ ಪ್ರೀತಿಸುವ ವಿಚಾರ ಊರಿನವರಿಗೂ ಗೊತ್ತಿತ್ತು. ಆದರೆ, ಪ್ರೀತಿಸಿದ ಯುವತಿಗೆ ಹಣ ನೀಡಿ ಬೇರೆ ಮದುವೆಯಾಗಲು ಹೇಳಿ ಬೇರೆ ಹುಡುಗಿ ಜೊತೆ ಮದುವೆಯಾಗಲು ಮುಂದಾಗಿದ್ದ. ಈ ಎಲ್ಲಾ ವಿಚಾರಗಳನ್ನು ತಿಳಿದ ಗ್ರಾಮಸ್ಥರು ಓಡಿ ಹೋಗಲು ಪ್ರಯತ್ನಿಸಿದ ರೇಣುಕುಮಾರನನ್ನು ಎಳೆದುತಂದು ಕಾರಗಳ್ಳಿ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಯುವತಿಯೊಂದಿಗೆ ಮದುವೆ ಮಾಡಿಸಿದ್ದಾರೆ.
ರೇಣುಕುಮಾರ್ ಕೆಎಸ್‍ಆರ್ ಟಿಸಿ ಬಸ್ ಚಾಲಕನಾಗಿ ಹಾಗೂ ರೋಜಾ ಟಿ.ನರಸೀಪುರ ತಾಲ್ಲೂಕು ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಇವರು 5 ವರ್ಷಗಳಿಂದ ಪ್ರೀತಿಸುತ್ತಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.