Select Your Language

Notifications

webdunia
webdunia
webdunia
webdunia

ಕಮಲ್ ಹಾಸನ್ ‘ಇಂಡಿಯಾ 2’ ಚಿತ್ರ ವಿಳಂಬವಾಗಲು ಕಾರಣವೇನಂತೆ ಗೊತ್ತಾ?

ಕಮಲ್ ಹಾಸನ್ ‘ಇಂಡಿಯಾ 2’ ಚಿತ್ರ ವಿಳಂಬವಾಗಲು ಕಾರಣವೇನಂತೆ ಗೊತ್ತಾ?
ಚೆನ್ನೈ , ಗುರುವಾರ, 18 ಮಾರ್ಚ್ 2021 (12:26 IST)
ಚೆನ್ನೈ : 1996ರಲ್ಲಿ ಬ್ಲಾಕ್ಬಸ್ಟರ್ ಚಿತ್ರ ‘ಇಂಡಿಯನ್ ‘ ಬಿಡುಗಡೆಯಾದ 24 ವರ್ಷಗಳ ಬಳಿಕ ನಟ ಕಮಲ್ ಹಾಸನ್ ಮತ್ತು ನಿರ್ದೇಶಕ ಶಂಕರ್ ಕೈಜೋಡಿಸಿ ಈಗ‘ಇಂಡಿಯನ್  ಚಿತ್ರದ ಮುಂದುವರಿದ ಭಾಗ ‘ಇಂಡಿಯನ್ 2’ ಚಿತ್ರ ಮಾಡುತ್ತಿದ್ದಾರೆ.

ಆದರೆ ಈ ಚಿತ್ರ  ನಿರ್ಮಿಸಲು ಸಾಕಷ್ಟು ವಿಳಂಬವಾಗಿದ್ದು, ಇನ್ನು ಚಿತ್ರ ಪೂರ್ಣಗೊಂಡಿಲ್ಲ. ಪ್ರಸ್ತುತ ಕಮಲ್ ಹಾಸನ್ ಅವರು ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿದ್ದಾರೆ. ಹಾಗೇ ನಿರ್ದೇಶಕ ಶಂಕರ್ ಅವರು ನಟ ರಾಮ್ ಚರಣ್ ಮುಂದಿನ ಚಿತ್ರ ಪ್ರಾರಂಭಿಸಲಿದ್ದಾರೆ.

ಇದೀಗ ಇಂಡಿಯಾ 2 ಚಿತ್ರದ ನಟಿ ಕಾಜಲ್ ಅಗರ್ವಾಲ್ ಅವರು ಇಂಡಿಯನ್ 2 ವಿಳಂಬದ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟ ಹೆಚ್ಚಿನ ತಂತ್ರಜ್ಞರು ಪ್ರಸ್ತುತ ಯುನೈಟೆಡ್ ಸ್ಟೇಟ್ ನಲ್ಲಿದ್ದಾರೆ. ಅಲ್ಲಿ ಲಾಕ್ ಡೌನ್ ಪರಿಸ್ಥಿತಿಯಿಂದ ಅವರು ಭಾರತಕ್ಕೆ ಮರಳಲು ಸಾಧ್ಯವಾಗಲಿಲ್ಲ.ಹಾಗಾಗಿ ಇಂಡಿಯನ್ 2 ಚಿತ್ರ ಪ್ರಸ್ತುತ ಸ್ಥಗಿತಗೊಂಡಿದೆ ಎಂದು ಬಹಿರಂಗಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಸ್ಟುಡಿಯೋ ಪ್ರಾರಂಭಿಸಿದ ಇಳಯರಾಜರಿಗೆ ಸ್ಪೇಷಲ್ ಗಿಫ್ಟ್ ನೀಡಿದ ನಟ ವಿವೇಕ್