Select Your Language

Notifications

webdunia
webdunia
webdunia
webdunia

ಮಾಸ್ಟರ್ ಚಿತ್ರ 50% ಮಾತ್ರ ತಮ್ಮ ನಿರ್ದೇಶನದ ಚಿತ್ರ ಎಂದು ನಿರ್ದೇಶಕರು ಹೇಳಿದ್ದೇಕೆ?

ಮಾಸ್ಟರ್ ಚಿತ್ರ 50% ಮಾತ್ರ ತಮ್ಮ ನಿರ್ದೇಶನದ ಚಿತ್ರ ಎಂದು ನಿರ್ದೇಶಕರು ಹೇಳಿದ್ದೇಕೆ?
ಚೆನ್ನೈ , ಶುಕ್ರವಾರ, 1 ಜನವರಿ 2021 (11:02 IST)
ಚೆನ್ನೈ : ಕಾಲಿವುಡ್ ನ ಖ್ಯಾತ ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದು, ಇದೇ ವರ್ಷ ಜನವರಿ 13ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಈ ನಡುವೆ ಮಾಸ್ಟರ್ ಚಿತ್ರದ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಸಂದರ್ಶನವೊಂದರಲ್ಲಿ ಚಿತ್ರದ ಬಗ್ಗೆ ಆಸಕ್ತಿದಾಯಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಈ ಮಾಸ್ಟರ್ ಚಿತ್ರವನ್ನು 50% ನಷ್ಟು ಮಾತ್ರ ಅವರು ನಿರ್ದೇಶಿಸಿದ್ದಾರಂತೆ. ಹಾಗಾದ್ರೆ ಉಳಿದ 50%ನಷ್ಟು ಯಾರು ನಿರ್ದೇಶಿಸಿದ್ದಾರೆ ಎಂಬ ಕುತೂಹಲ ಹಲವರಲ್ಲಿ ಕಾಡಬಹುದು.

ಹಾಗಾದ್ರೆ ಉಳಿದ 50%ನಷ್ಟು ಚಿತ್ರವನ್ನು ನಟ ವಿಜಯ್ ಅವರು ನಿರ್ದೇಶಿಸಿದ್ದಾರಂತೆ. ಚಿತ್ರದ ಕೊನೆಯ ಶೂಟಿಂಗ್ ದಿನ ವಿಜಯ್ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ನಟಿಸಲು ಹೇಳಿದ್ದಾರಂತೆ. ಇದಕ್ಕೆ ಅವರು ವಿಜಯ್ ನಿರ್ದೇಶಿಸಿದರೆ ತಾವು ನಟಿಸುವುದಾಗಿ ತಿಳಿಸಿದ್ದಾರಂತೆ. ಹಾಗಾಗಿ ಒಂದು ದೃಶ್ಯದಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್ ನಟಿಸಿದ್ದು, ಆ ದೃಶ್ಯಕ್ಕೆ ವಿಜಯ್ ನಿರ್ದೇಶನ ಮಾಡಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಕ್ಕೆ ಹೊಸ ಸಿನಿಮಾ ಪೋಸ್ಟರ್ ಗಳು