Publish Date: Thu, 24 May 2018 (16:58 IST)
Updated Date: Thu, 24 May 2018 (17:01 IST)
ಬೆಂಗಳೂರು : ಕಾವೇರಿ ವಿಚಾರವಾಗಿ ಕರ್ನಾಟಕದ ಪರವಾಗಿ ಮಾತನಾಡಿ ಕನ್ನಡಿಗರ ಮನಗೆದ್ದ ತಮಿಳು ನಟ ಸಿಂಬು ಅವರು ಇದೀಗ ಬೆಂಗಳೂರಿಗೆ ಬಂದು ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗ್ತಾರಂತೆ.
ಹೌದು. ನಟ ಸಿಂಬು ಅವರು ಬೆಂಗಳೂರಿಗೆ ಬರುತ್ತಿರುವುದಕ್ಕೂ ಒಂದು ಕಾರಣ ಇದೆ. ಅದೇನೆಂದರೆ ಸಿಂಬು ಇತ್ತೀಚಿಗಷ್ಟೆ ಕನ್ನಡದ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾದ ಒಂದು ಹಾಡು ಹಾಡಿದ್ದರು. ಇದು ಅವರ ಮೊದಲ ಕನ್ನಡ ಹಾಡಾಗಿತ್ತು. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಇದೇ ತಿಂಗಳ 25ಕ್ಕೆ ನಡೆಯಲಿದ್ದು ಸಿಂಬು ಅವರೇ ಚಿತ್ರದ ಆಡಿಯೋ ರಿಲೀಸ್ ಕೂಡ ಮಾಡಲಿದ್ದಾರೆ. ಸಿಂಬು ಅವರ ಜೊತೆಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಧ್ರುವ ಸರ್ಜಾ ಅವರು ಕೂಡ ಕಾರ್ಯಕ್ರಮದ ಅತಿಥಿ ಆಗಲಿದ್ದು ಈ ಮೂಲಕ ಸಿಂಬು ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ