Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದ ನಟ ಕಮಲ್ ಹಾಸನ್

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದ ನಟ ಕಮಲ್ ಹಾಸನ್
ಬೆಂಗಳೂರು , ಗುರುವಾರ, 24 ಮೇ 2018 (14:21 IST)
ಬೆಂಗಳೂರು : ಬುಧವಾರ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ದಕ್ಷಿಣ ಭಾರತದ ನಟ ಹಾಗು ನೂತನ ಪಕ್ಷದ ರಾಜಕೀಯ ನಾಯಕ ಕಮಲ್ ಹಾಸನ್ ಅವರು ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.


 ನಟ ಕಮಲ್ ಹಾಸನ್ ಅವರು ತಮ್ಮ ಟ್ವೀಟರ್ ನಲ್ಲಿ ‘ಈ ಮೂಲಕ ಕರ್ನಾಟಕ ಹಾಗು ತಮಿಳುನಾಡಿನ ಜ್ವಲಂತ ಸಮಸ್ಯೆಯಾದ ಕಾವೇರಿ ನೀರಿನ ಸಮಸ್ಯೆಯನ್ನು ರಾಜಕೀಯವಾಗಿ ಹಾಗು ಸಾಮಾಜಿಕವಾಗಿ ನಮ್ಮ ರಾಜ್ಯಗಳ ನಡುವಿನ ಸಂವಾದಕ್ಕೆ ಉತ್ತಮ ಆರಂಭ ದೊರೆತಿದೆ. ವಿವಿಧ ಪಕ್ಷಗಳ ಮುಖಂಡರ ನಡುವೆ ಆರೋಗ್ಯಪೂರ್ಣ ವಿಚಾರ ವಿನಿಮಯಕ್ಕೆ ಪ್ರಮಾಣವಚನ ಸಮಾರಂಭ ಉತ್ತಮ ವೇದಿಕೆಯಾಗಿದೆ. ಮುಂದೇನಾಗುವುದೋ ಎಂಬ ಕುತೂಹಲವೂ ಸಹ ಇದೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊಟ್ಟ ಸಾಲಮನ್ನಾ ಮಾತು ಉಳಿಸಿಕೊಳ್ಳಲಿ. ಇಲ್ಲದಿದ್ದರೆ ಕುರ್ಚಿಯಿಂದ ಕೆಳಗಿಳಿಯಲಿ – ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಶ್ರೀರಾಮುಲು ಸವಾಲು