Select Your Language

Notifications

webdunia
webdunia
webdunia
webdunia

ನಮ್ಮ ಹಿರಿಯರು ಪ್ರಕಾರ ಈ ಎಲ್ಲಾ ರೀತಿಯಲ್ಲಿ ಮಗುವಿಗೆ ತಾಕಿದ ದೃಷ್ಟಿಯನ್ನು ನಿವಾರಣೆ ಮಾಡಬಹುದಂತೆ

ನಮ್ಮ ಹಿರಿಯರು ಪ್ರಕಾರ ಈ ಎಲ್ಲಾ ರೀತಿಯಲ್ಲಿ ಮಗುವಿಗೆ ತಾಕಿದ ದೃಷ್ಟಿಯನ್ನು ನಿವಾರಣೆ ಮಾಡಬಹುದಂತೆ
ಬೆಂಗಳೂರು , ಗುರುವಾರ, 24 ಮೇ 2018 (06:27 IST)
ಬೆಂಗಳೂರು : ಚಿಕ್ಕಮಕ್ಕಳುನ್ನು ನೋಡಿ ಆ ಮಗು ಎಷ್ಟು ಚೆನ್ನಾಗಿದೆ, ಆ ಮಗು ಎಷ್ಟು ಮುದ್ದಾಗಿದೆ ಎಂದು ಯಾರೇ ಹೇಳಿದರೂ ಕೂಡ ಆ ಮಗುವಿಗೆ ದೃಷ್ಟಿ ತಾಕಿದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಈ ರೀತಿ ಮಗುವಿಗೆ ದೃಷ್ಟಿ ತಗಲದೆ ಹಾಗೂ ತಾಕಿದ ದೃಷ್ಟಿಗಳನ್ನು ತೆಗೆಯಲು ಹಲವು ವಿಧಗಳಿವೆ ಎಂದು ನಮ್ಮ ಹಿರಿಯರು ತಿಳಿಸಿದ್ದಾರೆ.


ಮಕ್ಕಳಿಗೆ ಕಪ್ಪಗಿನ ದೃಷ್ಟಿ ಬೊಟ್ಟು ಇಡುವುದರಿಂದ ಅವರಿಗೆ ದೃಷ್ಟಿ ತಾಕಲ್ಲವಂತೆ. ಅಷ್ಟೇ ಅಲ್ಲ, ಯಾರಾದರೂ ಅಂತಹ ಮಕ್ಕಳನ್ನು ನೋಡಿದ ಕೂಡಲೆ ಅವರ ದೃಷ್ಟಿ ಮೊದಲು ಆ ಬೊಟ್ಟಿನ ಮೇಲೆ ಬೀಳುತ್ತದೆ. ಇದರಿಂದ ಮಕ್ಕಳಿಗೆ ದೃಷ್ಟಿ ತಾಕುವುದಿಲ್ಲ ಎನ್ನುತ್ತಾರೆ ಹಿರಿಯರು.

ಹಾಗೇ ಕೆಂಪು, ಕಪ್ಪು, ಬಿಳಿ ಅನ್ನವನ್ನು ಮೂರು ಮುದ್ದೆ ಮಾಡಿಕೊಂಡು ಅವುಗಳಿಂದ ಭಾನುವಾರ ದೃಷ್ಟಿ ತೆಗೆದು ನಿವಾಳಿಸಿ ಎಸೆದರೆ ದೃಷ್ಟಿ ನಿವಾರಣೆಯಾಗುತ್ತದೆ. ಮೆಣಸಿನಕಾಯಿಯನ್ನು ಸುತ್ತಲೂ ಮೂರು ಬಾರಿ ನಿವಾಳಿಸಿ ಥೂ…ಥೂ…ಥೂ…ಎಂದು ಅವುಗಳಲ್ಲಿ ಉಗಿದರೂ ದೃಷ್ಟಿ ಹೋಗುತ್ತದೆ. ಪೊರಕೆ, ಚಪ್ಪಲಿಯನ್ನು ಅದೇ ರೀತಿ ಬಳಸಿ ದೃಷ್ಟಿ ತೆಗೆದರೂ ದೃಷ್ಟಿ ಹೋಗುತ್ತದೆ. ಕೊರಳಿಗೆ ಕಪ್ಪುದಾರ ಹಾಕಿದರೂ, ಕೈಗೆ ಅಥವಾ ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೂ ದೃಷ್ಟಿ ನಿವಾರಣೆಯಾಗುತ್ತದೆ ಎಂದು ನಮ್ಮ ಹಿರಿಯರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಿವಪೂಜೆಗೆ ಈ ಹೂವನ್ನು ಬಳಸಬಾರದಂತೆ. ಅದಕ್ಕೆ ಕಾರಣವೆನೆಂಬುದು ಇಲ್ಲಿದೆ ನೋಡಿ