Select Your Language

Notifications

webdunia
webdunia
webdunia
webdunia

ಸಾಲಮನ್ನಾ ವಿಷಯದಲ್ಲಿ ಯು ಟರ್ನ್ ಮಾಡುವುದಿಲ್ಲ - ಸುದ್ದಿಗೋಷ್ಟಿಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭರವಸೆ

ಸಾಲಮನ್ನಾ ವಿಷಯದಲ್ಲಿ ಯು ಟರ್ನ್ ಮಾಡುವುದಿಲ್ಲ - ಸುದ್ದಿಗೋಷ್ಟಿಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭರವಸೆ
ಬೆಂಗಳೂರು , ಬುಧವಾರ, 23 ಮೇ 2018 (20:21 IST)
ಬೆಂಗಳೂರು : ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಬುಧವಾರ (ಇಂದು) ಪ್ರಮಾನ ವಚನ ಸ್ವೀಕರಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮೊದಲ  ಸುದ್ದಿಗೋಷ್ಟಿ ನಡೆಸಿದ್ದಾರೆ.


ಈ ಸಂದರ್ಭದಲ್ಲಿ ಅವರು ರೈತರ ಸಾಲಮನ್ನಾ ಬಗ್ಗೆ ಉಲ್ಟಾ ಹೊಡೆದಿದ್ದಾರೆ ಎಂದು ಕೆಲವರು ಹೇಳಿರುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ಸಾಲಮನ್ನಾ ಬಗ್ಗೆ ಯು ಟರ್ನ್ ಅಂತ ಕೆಲವರು ಹೇಳಿದ್ದಾರೆ. ನಮಗೆ ಬಹುಮತ ಬಂದ್ರೆ 24 ಗಂಟೆಗಳಲ್ಲಿ ಸಾಲಮನ್ನಾ ಮಾಡುತ್ತೇನೆ ಅಂತ ನಾನು ಹೇಳಿದ್ದು ನಿಜ. ಆದರೆ ಈಗ ಸಮ್ಮಿಶ್ರ ಸರ್ಕಾರ ಬಂದಿದೆ. ನಾನು ಏಕಾಏಕಿ ನಿರ್ಧಾರ ಪ್ರಕಟ ಮಾಡಿದರೆ ಸರಿಯಲ್ಲ. ಮಿತ್ರ ಪಕ್ಷದ ಜೊತೆ ಚರ್ಚಿಸಿ ಸಾಲಮನ್ನಾ ಬಗ್ಗೆ ತೀರ್ಮಾನ ಮಾಡುವೆ. ರೈತರ ಸಾಲಮನ್ನಾ ಹೇಗೆ ಮಾಡಬೇಕೆಂಬ ಬ್ಲೂ ಪ್ರಿಂಟ್ ಒಂದನ್ನು ನಾನು ಈಗಾಗ್ಲೆ ಸಿದ್ಧಪಡಿಸಿದ್ದೇನೆ. ಅವರಿಗೂ ಬೇಸರವಾಗದಂತೆ ನಾನು ಕ್ರಮ ಕೈಗೊಳ್ತೇನೆ. ಸಾಲಮನ್ನಾ ವಿಷಯದಲ್ಲಿ ಯು ಟರ್ನ್ ಮಾಡುವುದಿಲ್ಲ ಎಂದು  ಸುದ್ದಿಗೋಷ್ಟಿಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವರು ಹಾಗೂ ಕನ್ನಡ ನಾಡಿನ ಜನತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರ ಮಾಡಿದ ನೂತನ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ