Select Your Language

Notifications

webdunia
webdunia
webdunia
webdunia

ಮೆಗಾಸ್ಟಾರ್ ಚಿರಂಜೀವಿ ಬೇಸರದಲ್ಲಿರಲು ಕಾರಣವೇನು ಗೊತ್ತಾ…?

ಮೆಗಾಸ್ಟಾರ್  ಚಿರಂಜೀವಿ ಬೇಸರದಲ್ಲಿರಲು ಕಾರಣವೇನು ಗೊತ್ತಾ…?
ಹೈದರಾಬಾದ್ , ಗುರುವಾರ, 5 ಏಪ್ರಿಲ್ 2018 (07:15 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರು ತುಂಬಾ ಬೇಸರಗೊಂಡಿದ್ದಾರಂತೆ. ಇದಕ್ಕೆ ಕಾರಣ ಬಾಲಿವುಡ್ ಸ್ಟಾರ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

‘ಸೈ.ರಾ.ನರಸಿಂಹ ರೆಡ್ಡಿ’ ಚಿತ್ರದಲ್ಲಿ ಚಿರಂಜೀವಿ ಹಾಗು ಅಮಿತಾಬ್ ಬಚ್ಚನ್ ಅವರು ಜೊತೆಯಾಗಿ ನಟಿಸುತ್ತಿದ್ದು, ಚಿರಂಜೀವಿ ಅವರ ಜೊತೆ ಕೆಲಸ ಮಾಡಲು ನನಗೆ ಹೆಮ್ಮೆ ಅನಿಸುತ್ತಿದೆ ಎಂದು ಹಿಂದೊಮ್ಮೆ ಅಮಿತಾಬ್ ಅವರು ಹೇಳಿದ್ದರು. ಆದರೆ ಇದೀಗ ಅಮಿತಾಬ್ ಬಚ್ಚನ್ ಅವರು ಚಿರಂಜೀವಿ ಅವರ ಸೈರಾ ಚಿತ್ರದ ಗೆಟ್ ಅಪ್ ಲೀಕ್ ಮಾಡಿದ್ದು ಇದು ಚಿರು ಅವರ ಬೇಸರಕ್ಕೆ ಕಾರಣ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

 

ಚಿರಂಜೀವಿ ಅವರು ತಮ್ಮ ಗೆಟ್ ಅಪ್ ಬಗ್ಗೆ ಅಭಿಮಾನಿಗಳಿಗೆ ಸರ್ಫ್ರೈಸ್ ಕೊಡಬೇಕೆಂದುಕೊಂಡಿದ್ದಾರಂತೆ. ಆದರೆ ಚಿರಂಜೀವಿ ಅವರ ಗೆಟ್ ಅಪ್ ಕುರಿತಂತೆ ಅಮಿತಾಬ್ ತಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದ್ದಾರಂತೆ. ಆದಕಾರಣ ಇದೀಗ ತಮ್ಮ ಗೆಟ್ ಅಪ್ ಲೀಕ್ ಆಗಿದೆ ಎಂದು ಚಿರಂಜೀವಿ ಅವರು ಬೇಸರದಲ್ಲಿದ್ದಾರಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ `

 


Share this Story:

Follow Webdunia kannada

ಮುಂದಿನ ಸುದ್ದಿ

ಅಜಯ್ ದೇವಗನ್ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಫೋಟೋ ನೋಡಿ ಅಭಿಮಾನಿಗಳೇಕೆ ಆಕ್ರೋಶಗೊಂಡಿದ್ದು…?